ಬೆಂಗಳೂರು: ರಾಜ್ಯದಲ್ಲಿ ಕಠಿಣ ನಿಯಮ ಜಾರಿಯಾಗಿದ್ದರಿಂದ ಖಾಸಗಿ ಬಸ್ ಟಿಕೆಟ್ ದರವನ್ನು ಮೂರು ಪಟ್ಟು ಹೆಚ್ಚಳ ಮಾಡಲಾಗಿದೆ.
ಬೆಂಗಳೂರಿನಿಂದ ಹೆಚ್ಚಿನ ಸಂಖ್ಯೆಯ ಜನ ಊರಿಗೆ ಹೊರಟ ಹಿನ್ನೆಲೆಯಲ್ಲಿ ಖಾಸಗಿ ಬಸ್ ಗಳಲ್ಲಿ ಮೂರು ಪಟ್ಟ ದರ ಹೆಚ್ಚಳಮಾಡಿ ಪ್ರಯಾಣಿಕರಿಗೆ ಶಾಕ್ ನೀಡಲಾಗಿದೆ. ಟಿಕೆಟ್ ದರ ದುಬಾರಿಯಾಗಿದ್ದರೂ ಜನ ನಿವಾರ್ಯವಾಗಿ ಬೆಂಗಳೂರಿಂದ ಊರಿಗೆ ತೆರಲಿದ್ದಾರೆ.
ನಿರಂತರ ಸೇವೆ ನೀಡುವ ಬಸ್ ಗಳಲ್ಲಿ ದುಪ್ಪಟ್ಟು ಹಣ ಪಡೆಯಲಾಗಿದೆ. ಹಬ್ಬ, ವಿಶೇಷ ದಿನಗಳಲ್ಲಿ ಸಂಚರಿಸುವ ಬಸ್ ಗಳಲ್ಲಿ ಅದಕ್ಕಿಂತಲೂ ಹೆಚ್ಚಿನ ಹಣ ವಸೂಲಿ ಮಾಡಲಾಗಿದೆ. ಬೆಂಗಳೂರಿನಿಂದ ಹುಬ್ಬಳ್ಳಿಗೆ ಕೆಎಸ್ಆರ್ಟಿಸಿ ಬಸ್ ಗಳಲ್ಲಿ 781 ರೂಪಾಯಿ ದರ ಇದ್ದರೆ, ಎಸಿ ಕೋಚ್ ಬಸ್ ಗಳಿಗೆ 1200 -3000 ರೂ.ವರೆಗೂ ದರ ಹೆಚ್ಚಳ ಮಾಡಲಾಗಿದೆ. ಎಸಿ ಸ್ಲೀಪರ್ ಕೋಚ್ ಗಳಲ್ಲಿ 7500 ರೂ.ವರೆಗೂ ಹಣ ಪಡೆಯಲಾಗಿದೆ ಎನ್ನಲಾಗಿದೆ.