alex Certify BIG NEWS: ಚಾಲಕರು, ಕಂಡಕ್ಟರುಗಳಿಗೆ ಅಗ್ನಿಶಾಮಕ ತರಬೇತಿ ನೀಡಲು ಮುಂದಾದ ಬಿಎಂಟಿಸಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಚಾಲಕರು, ಕಂಡಕ್ಟರುಗಳಿಗೆ ಅಗ್ನಿಶಾಮಕ ತರಬೇತಿ ನೀಡಲು ಮುಂದಾದ ಬಿಎಂಟಿಸಿ

ತನ್ನ 186 ಮೀಡಿಯಂ ಬಸ್‌ಗಳನ್ನು ತಾತ್ಕಾಲಿಕವಾಗಿ ಸೇವೆಯಿಂದ ಹೊರಗಿಟ್ಟ ಬಳಿಕ ಇದೀಗ ಬಿಎಂಟಿಸಿ ತನ್ನೆಲ್ಲಾ ಚಾಲಕರಿಗೆ ಅಗ್ನಿ ಸುರಕ್ಷತಾ ಅಭ್ಯಾಸಗಳನ್ನು ಮೈಗೂಡಿಸಿಕೊಳ್ಳಲು ತರಬೇತಿ ನೀಡುತ್ತಿದೆ.

ಮಧ್ಯಮ ಗಾತ್ರದಲ್ಲಿರುವ, ಮೀಡಿಯಂ ಬಸ್‌ಗಳು ಎನ್ನಲಾಗುವ ಈ ಬಸ್ಸುಗಳನ್ನು 2014-15ರಲ್ಲಿ ಅಶೋಕ್ ಲೇಲ್ಯಾಂಡ್‌ನಿಂದ ಖರೀದಿ ಮಾಡಲಾಗಿತ್ತು. ಕೋವಿಡ್ ಸಾಂಕ್ರಾಮಿಕದ ಕಾರಣದಿಂದಾಗಿ ಕಳೆದ 2 ವರ್ಷಗಳಿಂದ ಈ ಬಸ್ಸುಗಳನ್ನು ಬಿಎಂಟಿಸಿ ಪೂರ್ಣ ಸಂಖ್ಯೆಯಲ್ಲಿ ಓಡಿಸುತ್ತಿಲ್ಲ.

ಜನವರಿ 21 ಹಾಗೂ ಫೆಬ್ರವರಿ 1ರಂದು ಇಂಥ ಎರಡು ಬಸ್ಸುಗಳು ಬೆಂಕಿಗೆ ಆಹುತಿಯಾದ ಬಳಿಕ ಬಿಎಂಟಿಸಿಯ ಹಿರಿಯ ಅಧಿಕಾರಿಗಳು ಹಾಗೂ ಕಂಪನಿಯ ತಜ್ಞರು ಪ್ರತಿನಿತ್ಯ 20-30 ಬಸ್ಸುಗಳ ತಪಾಸಣೆ ಮಾಡುತ್ತಿದ್ದು, ಸಮಸ್ಯೆ ಏನೆಂದು ಅರಿಯಲು ಯತ್ನಿಸುತ್ತಿದ್ದಾರೆ.

BIG BREAKING NEWS: ವೇಗವಾಗಿ ಕುಸಿತ ಕಂಡ ಕೊರೊನಾ ಸೋಂಕಿತರ ಸಂಖ್ಯೆ; ಆದರೆ ಸಾವಿನ ಸಂಖ್ಯೆಯಲ್ಲಿ ಗಣನೀಯ ಏರಿಕೆ

ಅವಘಡದ ಕುರಿತು ನಡೆಸಿದ ಪ್ರಾಥಮಿಕ ತನಿಖೆ ವೇಳೆ, ಬಸ್ಸುಗಳಲ್ಲಿರುವ ಅಗ್ನಿಶಾಮಕ ಉಪಕರಣದ ಬಳಕೆ ಮಾಡುವುದು ಚಾಲಕರಿಗೆ ಗೊತ್ತಿರಲಿಲ್ಲವೆಂದು ತಿಳಿದ ಬಳಿಕ, ತನ್ನ ಚಾಲಕರು ಹಾಗೂ ಕಂಡಕ್ಟರ್‌ಗಳಿಗೆ ಈ ಕುರಿತು ತರಬೇತಿ ನೀಡಲು ಬಿಎಂಟಿಸಿ ಮುಂದಾಗಿದೆ.

ಈ ಕುರಿತು ಮಾತನಾಡಿದ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ ಅಂಬು ಕುಮಾರ್‌, “ಚಾಲಕರು ಅಗ್ನಿಶಾಮಕ ಉಪಕರಣಗಳ ಬಳಕೆ ಮಾಡಿದ್ದರೆ, ಬಸ್ಸುಗಳು ಪೂರ್ಣವಾಗಿ ಉರಿದು ಹೋಗುತ್ತಿರಲಿಲ್ಲ. ಎಲ್ಲಾ ಅಧಿಕಾರಿಗಳು, ನನ್ನನ್ನೂ ಸೇರಿಸಿಕೊಂಡು, ತರಬೇತಿ ಪಡೆಯುತ್ತಿದ್ದೇವೆ’’ ಎಂದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...