
ಮದುವೆ ಕಾರ್ಯಕ್ರಮದಿಂದ ವಾಪಾಸ್ ಆಗುತ್ತಿದ್ದ ವೇಳೆ ಬಸ್ ಸಿಂಧೂ ನದಿಗೆ ಉರುಳಿ ಬಿದ್ದ ಪರಿಣಾಮ 25 ಜನರು ಸಾವನ್ನಪ್ಪಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.
ಉತ್ತರ ಗಿಲ್ಗಿಟ್-ಬಾಲ್ಟಿಸ್ತಾನ್ ಪ್ರದೇಶದಲ್ಲಿ ಈ ದುರಂತ ಸಂಭವಿಸಿದೆ. ಬಸ್ ನಲ್ಲಿ ಒಟ್ಟು 28 ಜನರು ಇದ್ದರು. ಡೈಮರ್ ಜಿಲ್ಲೆಯ ಥಾಲಿಚಿ ಪ್ರದೇಶಕ್ಕೆ ಬಸ್ ಬರುತ್ತಿದ್ದಂತೆ ನಿಯಂತ್ರಣ ತಪ್ಪಿ ಸಿಂಧೂ ನದಿಗೆ ಬಿದ್ದಿದೆ. 26 ಜನರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ರಕ್ಷಣಾ ತಂಡಗಳು ಧಾವಿಸಿವೆ. ಈವರೆಗೆ 16 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಕಾರ್ಯಾಚರಣೆ ಮುಂದುವರೆದಿದೆ. ಬಸ್ ದುರಂತದ ಬಗ್ಗೆ ಪಾಕಿಸ್ತಾನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಸಂತಾಪ ಸೂಚಿಸಿದ್ದಾರೆ.