
ಶಿವಮೊಗ್ಗ: ಸರ್ಕಾರಿ ಮತ್ತು ಖಾಸಗಿ ಬಸ್ ಡಿಕ್ಕಿಯಾಗಿ 50 ಕ್ಕೂ ಅಧಿಕ ಪ್ರಯಾಣಿಕರು ಗಾಯಗೊಂಡ ಘಟನೆ ಶಿವಮೊಗ್ಗ ತಾಲೂಕಿನ ತೋಟದಕೆರೆ ಸಮೀಪ ನಡೆದಿದೆ.
ಗಾಯಾಳು ಪ್ರಯಾಣಿಕರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಖಾಸಗಿ ಬಸ್ ಚಾಲಕ ಶ್ರೀಧರ್ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಿವಮೊಗ್ಗದಿಂದ ಎನ್.ಆರ್. ಪುರ –ಕೊಪ್ಪ ಕಡೆಗೆ ಹೋಗುವ ಕೆಕೆಬಿ ಬಸ್ ಹಾಗೂ ಎನ್.ಆರ್. ಪುರದಿಂದ ಶಿವಮೊಗ್ಗಕ್ಕೆ ಬರುವ ಕೆ.ಎಸ್.ಆರ್.ಟಿ.ಸಿ. ಬಸ್ ಉಂಬ್ಳೇಬೈಲು ಗ್ರಾಮ ಪಂಚಾಯಿತಿಯ ತೋಟದಕೆರೆ ಕ್ರಾಸ್ ಬಳಿ ಮುಖಾಮುಖಿ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ತುಂಗಾ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.