
ಬಸ್ ಪಲ್ಟಿಯಾಗಿ ಮೂವರು ಸಾವನ್ನಪ್ಪಿದ್ದು, 25 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ.
ಬಸ್ ನಾಗ್ಪುರಕ್ಕೆ ತೆರಳುತ್ತಿತ್ತು. ಜಬಲ್ಪುರದ ರಾಮನ್ ಘಾಟಿ ಪ್ರದೇಶದಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ಪಲ್ಟಿಯಾಗಿ ಬಿದ್ದಿದೆ. ಸ್ಥಳದಲ್ಲೇ ಮೂವರು ಸಾವನ್ನಪಿದ್ದಾರೆ. ಮೃತರನ್ನು ಹೈದರಾಬಾದ್ ಮೂಲದ ಮಾಲ್ಮಾ (45), ಶುಭಂ ಮೆಶ್ರಮ್ (28) ಹಾಗೂ ಅಮೋಲ್ ಖೋಡೆ (42) ಎಂದು ಗುರುತಿಸಲಾಗಿದೆ.
ಗಾಯಾಳುಗಳನ್ನು ಲಖ್ನಾದಾನ್ ಪಟ್ಟಣ ಹಾಗೂ ಜಬಲ್ಪುರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.