ಬೆಂಗಳೂರು: ಸರ್ಕಾರಿ ಬಸ್ ಗಳಲ್ಲಿ 2 ಸಾವಿರ ರೂಪಾಯಿ ನೋಟಿಗೆ ನಿಷೇಧ ಹೇರಲಾಗಿದೆ. 2000 ರೂ. ಪಡೆದುಕೊಳ್ಳದಂತೆ ಕಂಡಕ್ಟರ್ ಗಳಿಗೆ ಸಾರಿಗೆ ಇಲಾಖೆಯಿಂದ ಸೂಚನೆ ನೀಡಲಾಗಿದೆ.
ಪ್ರಯಾಣಿಕರು ನೀಡುವ 2000 ರೂ. ನೋಟುಗಳನ್ನು ಪಡೆಯದಂತೆ ನಿರ್ವಾಹಕರಿಗೆ ಸೂಚನೆ ನೀಡಲಾಗಿದೆ. ಬ್ಯಾಂಕುಗಳಲ್ಲಿಯೇ ನೋಟು ಬದಲಿಸಿಕೊಳ್ಳಲು ಪ್ರಯಾಣಿಕರಿಗೆ ತಿಳಿಸಲು ಹೇಳಲಾಗಿದೆ. ಸಾರಿಗೆ ಘಟಕದ ನಿಗಮ ಮತ್ತು ಶಾಖೆಗಳಲ್ಲಿ ಎರಡು ಸಾವಿರ ರೂಪಾಯಿ ನೀಡದಂತೆ ಸರ್ಕಾರಿ ಬಸ್ ನಿರ್ವಾಹಕರು ಮತ್ತು ಸಿಬ್ಬಂದಿಗೆ ಸಾರಿಗೆ ಸಂಸ್ಥೆ ಸೂಚನೆ ನೀಡಿದೆ.
ಆರ್.ಬಿ.ಐ. ಚಲಾವಣೆಯಿಂದ 2000 ರೂ. ನೋಟುಗಳನ್ನು ಹಿಂಪಡೆದುಕೊಂಡಿದೆ. ಬ್ಯಾಂಕ್ ಗಳಲ್ಲಿ ನೋಟು ಬದಲಾವಣೆಗೆ ಮತ್ತು ಖಾತೆಗೆ ಜಮಾ ಮಾಡಲು ಸೆಪ್ಟಂಬರ್ 30ರವರೆಗೆ ಅವಕಾಶ ನೀಡಲಾಗಿದೆ. ಅನೇಕರು ತಮ್ಮಲ್ಲಿರುವ 2000 ನೋಟುಗಳನ್ನು ಖಾಲಿ ಮಾಡಿಕೊಳ್ಳಲು ಪೆಟ್ರೋಲ್ ಬಂಕ್ ಹಾಗೂ ಇತರೆ ಕಡೆಗಳಲ್ಲಿ ವ್ಯವಹಾರಕ್ಕೆ ನೀಡುತ್ತಿದ್ದಾರೆ. ಇದರಿಂದ ಚಿಲ್ಲರೆ ಸಮಸ್ಯೆ ಎದುರಾಗಿದೆ.