ಬುರ್ಜ್ ಖಲೀಫಾ ವಿಶ್ವದ ಅತ್ಯಂತ ಜನಪ್ರಿಯ ವಾಸ್ತುಶಿಲ್ಪದ ಅದ್ಭುತಗಳಲ್ಲಿ ಒಂದಾಗಿದೆ. ಇದನ್ನು ನೋಡಲು ಜಗತ್ತಿನಾದ್ಯಂತದಿಂದ ಜನರು ಬರುತ್ತಾರೆ. ಇದೀಗ ಕಟ್ಟಡದ ಆಕರ್ಷಣೆಯನ್ನು ಹೆಚ್ಚಿಸಲು ಜ್ನೆರಾ ಸ್ಪೇಸ್ ಎಂಬ ವಾಸ್ತುಶಿಲ್ಪ ಸಂಸ್ಥೆಯು ಹೊಸ ಪ್ರಸ್ತಾವನೆ ಸಿದ್ಧಪಡಿಸಿದೆ.
ವಿಶ್ವದ ಅತಿ ಎತ್ತರದ ಕಟ್ಟಡದ ಸುತ್ತಲೂ ಒಂದು ಉಂಗುರ ಆಕಾರದ ಸುತ್ತು ನಿರ್ಮಿಸಲು ಉದ್ದೇಶಿಸಿದ್ದು, ಡೌನ್ಟೌನ್ ಸರ್ಕಲ್ ಪ್ರಾಜೆಕ್ಟ್ ಎಂದು ಹೆಸರಿಸಲಾಗಿದೆ. ಪರಿಕಲ್ಪನೆಯ ವಿನ್ಯಾಸವು 550 ಮೀಟರ್ ಎತ್ತರದಲ್ಲಿರಲಿದ್ದು ಕಟ್ಟಡವನ್ನು ಸುತ್ತುವರೆಯಲಿದೆ.
ಮೂರು ಕಿಲೋಮೀಟರ್ ಸುತ್ತಳತೆಯೊಂದಿಗೆ, ಈ ಕಟ್ಟಡವು ಎಲ್ಲಾ ಡೌನ್ಟೌನ್ ಸುತ್ತುವರೆದಿರುತ್ತದೆ, ಏಕೆಂದರೆ ಯೋಜನೆಯು ಇಡೀ ಪ್ರದೇಶವನ್ನು ಒಳಗೊಳ್ಳುವ ಗುರಿಯನ್ನು ಹೊಂದಿದೆ.
ಡೌನ್ಟೌನ್ ಸರ್ಕಲ್ ವಸತಿ, ವಾಣಿಜ್ಯ ಮತ್ತು ಸಾಂಸ್ಕೃತಿಕ ಸ್ಥಳವನ್ನು ಒಳಗೊಂಡಿರುತ್ತದೆ. ಜಲಪಾತಗಳು ಮತ್ತು ಉಷ್ಣವಲಯದ ಸಸ್ಯವರ್ಗವನ್ನು ಸಹ ಹೊಂದಿರಲಿದೆ. ಸುಸ್ಥಿರತೆಯ ಕಲ್ಪನೆಯಲ್ಲಿ ಸ್ಕೆಪಾರ್ಕ್ ಮಳೆನೀರು ಮತ್ತು ಸೌರಶಕ್ತಿಯನ್ನು ಕೊಯ್ಲು ಮಾಡುವ ಸಾಧನಗಳನ್ನು ಸಹ ಹೊಂದಿರುತ್ತದೆ.
ಇದರ ಜೊತೆಗೆ, ಕಾರ್ಬನ್ ಮತ್ತು ಇತರ ಮಾಲಿನ್ಯಕಾರಕ ಫಿಲ್ಟರ್ಗಳನ್ನು ಹೊಂದಿರುತ್ತದೆ. ಈ ಅದ್ಭುತ ವಾಸ್ತುಶಿಲ್ಪದ ಪರಿಕಲ್ಪನೆಯ ಹಿಂದಿನ ಮಿದುಳುಗಳು ಜ್ನೆರಾ ಸ್ಪೇಸ್ನ ಸಂಸ್ಥಾಪಕರಾದ ನಜ್ಮಸ್ ಚೌದ್ರಿ ಮತ್ತು ನಿಲ್ಸ್ ರೆಮೆಸ್ ಅವರದ್ದಾಗಿದೆ.