alex Certify ಬಾಬಾ ಆಗಿ ಬದಲಾಗಿದ್ದ ಕಳ್ಳ ಮೂರು ದಶಕದ ಬಳಿಕ ಸಿಕ್ಕಿಬಿದ್ದ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಾಬಾ ಆಗಿ ಬದಲಾಗಿದ್ದ ಕಳ್ಳ ಮೂರು ದಶಕದ ಬಳಿಕ ಸಿಕ್ಕಿಬಿದ್ದ…!

 

ಬರೋಬ್ಬರಿ 31 ವರ್ಷದ ಬಳಿಕ ಕಳ್ಳತನ ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆದ್ರೆ ಅಚ್ಚರಿ ವಿಷಯ ಎಂದರೆ ಪ್ರಕರಣದ ಓರ್ವ ಆರೋಪಿ ಬಾಬಾ ಆಗಿ ವೇಷ ಧರಿಸಿದ್ದರೆ, ಕೋರ್ಟ್ ದಾಖಲೆಯಲ್ಲಿ ಸಾವನ್ನಪ್ಪಿರುವ ಮತ್ತೋರ್ವ ಆರೋಪಿ ಮರಗಳನ್ನು ಮಾರುತ್ತಾ ವ್ಯಾಪಾರ ಮಾಡ್ತಿದ್ದ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿರೋ ಈ ಘಟನೆಯಲ್ಲಿ ಪೊಲೀಸರು 3 ದಶಕದ ಬಳಿಕ ಕಳ್ಳರಿಗೆ ಕೋಳ ತೊಡಿಸಿದ್ದಾರೆ.

31 ವರ್ಷದ ಕಳ್ಳತನ ಪ್ರಕರಣದಲ್ಲಿ ಬೇಕಾಗಿದ್ದ 51 ವರ್ಷದ ವ್ಯಕ್ತಿ ಧಾರ್ಮಿಕ ಗುರುವಾಗಿ ವೇಷ ಧರಿಸಿದ್ದ. ಫರೀದಾಬಾದ್‌ನ ದಾಸ್ದಿಯಾ ಹಳ್ಳಿಯ ಸಮೀಪವಿರುವ ಕಾಡಿನಲ್ಲಿ “ಬಾಬಾ” ಆಗಿ ವಾಸಿಸುತ್ತಿದ್ದ ನಂತರ, ಆಶ್ರಮದಲ್ಲಿ ಬೋಧಕನಾಗಿದ್ದನು. ಮತ್ತು ಆತ ಸುಮಾರು 500 ಅನುಯಾಯಿಗಳನ್ನು ಗಳಿಸಿದ್ದ.

ಘೋಷಿತ ಅಪರಾಧಿಗಳನ್ನು ಪತ್ತೆಹಚ್ಚಲು ಆರಂಭಿಸಿದ “ಆಪರೇಷನ್ ಪ್ರಹಾರ್” ಅಡಿಯಲ್ಲಿ ಪೊಲೀಸರು ಕಳ್ಳ ಬಾಬಾ ಚರಣ್ ಸಿಂಗ್ ನನ್ನು ಬಂಧಿಸಿದ್ದಾರೆ.

ಅಪರಾಧದಲ್ಲಿ ಅವನ ಪಾಲುದಾರನಾದ 62 ವರ್ಷದ ಅರ್ಜುನ್ ಸಿಂಗ್ ನ್ಯಾಯಾಲಯದ ದಾಖಲೆಗಳಲ್ಲಿ ಮೃತನಾಗಿದ್ದು ಮರವನ್ನು ಮಾರಾಟ ಮಾಡುವ ವ್ಯಾಪಾರ ಮಾಡುತ್ತಾ ಜೀವನ ನಡೆಸುತ್ತಿದ್ದದ್ದು ಬಯಲಾಗಿದೆ.

1991 ರ ಕಳ್ಳತನ ಪ್ರಕರಣದಲ್ಲಿ ಪೊಲೀಸರು ಅಂತಿಮವಾಗಿ ಇಬ್ಬರನ್ನು ಬಂಧಿಸಿದ್ದರು. ಜುಲೈ 15, 1998 ರಂದು ಅವರಿಬ್ಬರನ್ನೂ ಘೋಷಿತ ಅಪರಾಧಿಗಳೆಂದು ಘೋಷಿಸಲಾಯಿತು. ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ ಅರ್ಜುನ್ ಸಿಂಗ್ ಮೃತಪಟ್ಟಿದ್ದಾನೆಂದು ಘೋಷಿಸಲಾಗಿತ್ತು. ಅರ್ಜುನ್ ಸಿಂಗ್ ಈ ಹಿಂದೆ ಇತರ ಎರಡು ಪ್ರಕರಣಗಳಲ್ಲಿ ಭಾಗಿಯಾಗಿದ್ದ.

“ಆಪರೇಷನ್ ಪ್ರಹಾರ್” ಅಡಿಯಲ್ಲಿ ಪೊಲೀಸರು ಕಾರ್ಯಾಚರಣೆಗಿಳಿದಾಗ ಚರಣ್ ಸಿಂಗ್ ಆಶ್ರಮದಲ್ಲಿ ಬೋಧಕನಾಗಿ 500 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದ. ಅವರನ್ನು ವಿಚಾರಣೆಗೆ ಒಳಪಡಿಸಿ ನ್ಯಾಯಾಲಯದ ದಾಖಲೆಗಳಲ್ಲಿ ಸತ್ತಿರುವ ಅವನ ಸಹ ಆರೋಪಿ ಅರ್ಜುನ್ ಸಿಂಗ್ ಬಗ್ಗೆ ಕೇಳಲಾಯಿತು.

ಅರ್ಜುನ್ ಜೀವಂತವಾಗಿದ್ದು ಅರಣ್ಯದ ಸಮೀಪವಿರುವ ಫರಿದಾಬಾದ್‌ನ ದಾದಿಸ್ಯಾ ಗ್ರಾಮದಲ್ಲಿ ವಾಸಿಸುತ್ತಿದ್ದಾನೆ ಎಂದು ಚರಣ್ ಸಿಂಗ್ ಬಹಿರಂಗಪಡಿಸಿದ್ದ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...