alex Certify ಬುಡಕಟ್ಟು ಜನರಿಂದ ವಿಭಿನ್ನ ರೀತಿಯ ಹೊಸ ವರ್ಷಾಚರಣೆ: ಸಂತಸ ತರುವ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬುಡಕಟ್ಟು ಜನರಿಂದ ವಿಭಿನ್ನ ರೀತಿಯ ಹೊಸ ವರ್ಷಾಚರಣೆ: ಸಂತಸ ತರುವ ವಿಡಿಯೋ ವೈರಲ್

ಹೊಸ ವರ್ಷ ಶುರುವಾಗಿ ಎರಡು ದಿನವಾದರೂ ಅಲ್ಲಲ್ಲಿ ನಡೆದ ಹೊಸ ವರ್ಷಾಚರಣೆಯ ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತವೆ. ತಮಿಳುನಾಡಿನಿಂದ ಅಂಥದ್ದೇ ಒಂದು  ವಿಡಿಯೋ ವೈರಲ್​ ಆಗಿದೆ. ನೀಲಗಿರಿ ಬೆಟ್ಟಗಳಲ್ಲಿನ ಕೋಟಾ ಬುಡಕಟ್ಟಿನ ಸದಸ್ಯರು ಹೊಸ ವರ್ಷವನ್ನು ಸ್ವಾಗತಿಸಲು ಸಾಂಪ್ರದಾಯಿಕ ಜಾನಪದ ನೃತ್ಯವನ್ನು ಪ್ರದರ್ಶಿಸಿದ ವಿಡಿಯೋ ಇದಾಗಿದೆ.

ಈ ವಿಡಿಯೋವನ್ನು ಭಾರತೀಯ ಆಡಳಿತ ಅಧಿಕಾರಿ ಸುಪ್ರಿಯಾ ಸಾಹು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ , ಶ್ವೇತ ವಸ್ತ್ರಧಾರಿ ಬುಡಕಟ್ಟು ಸದಸ್ಯರು ದೊಡ್ಡ ಕ್ಯಾಂಪ್‌ಫೈರ್‌ನ ಸುತ್ತಲೂ ನೃತ್ಯ ಮಾಡುವುದನ್ನು ಕಾಣಬಹುದು ಮತ್ತು ಹಿನ್ನಲೆಯಲ್ಲಿ ಚೀರ್ಸ್ ಮತ್ತು ವಾದ್ಯಗಳ ಜಾನಪದ ಸಂಗೀತವನ್ನು ನುಡಿಸಲಾಗುತ್ತಿದೆ.

“ಕೋಟಾ ಬುಡಕಟ್ಟು ಜನಾಂಗದವರು ತಮ್ಮ ಸ್ಥಳೀಯ ಹಬ್ಬವನ್ನು ಆಚರಿಸುವಾಗ ಸುಂದರವಾದ ನೀಲಗಿರಿ ಬೆಟ್ಟಗಳು ಸಾಂಪ್ರದಾಯಿಕ ಸಂಗೀತ ಮತ್ತು ನೃತ್ಯದೊಂದಿಗೆ ಪ್ರತಿಧ್ವನಿಸುತ್ತವೆ. ಕೋಟಾಗಳು ನೀಲಗಿರಿಯ ಪುರಾತನ ನಿವಾಸಿಗಳು. ಅವರ ಆಕರ್ಷಕವಾದ ಬಿಳಿ ಉಡುಪುಗಳು ಹೊಸ ಭಾವನೆಯನ್ನು ಮೂಡಿಸುತ್ತವೆ ಮತ್ತು ಆಕರ್ಷಕವಾದ ನೃತ್ಯವು ನಮ್ಮನ್ನು ಮತ್ತೊಂದು ಜಗತ್ತಿಗೆ ಕರೆದುಕೊಂಡು ಹೋಗುತ್ತದೆ” ಎಂದು ಕ್ಯಾಪ್ಷನ್​ ನೀಡಲಾಗಿದೆ.

“ಅದ್ಭುತ ಪೋಸ್ಟ್. ಆದಿವಾಸಿಗಳು ತಮ್ಮ ಧಾರ್ಮಿಕ ಮತ್ತು ಸಾಂಸ್ಕೃತಿಕ ರೂಢಿಗಳು ಮತ್ತು ಮೌಲ್ಯಗಳನ್ನು ಬಹುಮಟ್ಟಿಗೆ ಸಂರಕ್ಷಿಸಿದ್ದಾರೆ. ನೃತ್ಯ/ಇತರ ಸೃಜನಾತ್ಮಕ ಚಟುವಟಿಕೆಗಳಿಗೆ ಅವರ ಒಲವು, ಅವರನ್ನು ಇತರ ಬುಡಕಟ್ಟು ಜನಾಂಗದವರಿಂದ ಪ್ರತ್ಯೇಕಿಸಿ. ಸರ್ಕಾರದ ಯೋಜನೆಗಳು ಮತ್ತು ಕಾರ್ಯಕ್ರಮಗಳು ಆಧುನಿಕ ಸಮಾಜದಲ್ಲಿ ನೆಲೆ ಕಂಡುಕೊಳ್ಳಲು ಸಹಾಯ ಮಾಡಿದೆ” ಎಂದು ಹಲವರು ಕಮೆಂಟ್​ ಮೂಲಕ ತಿಳಿಸಿದ್ದಾರೆ.

— Supriya Sahu IAS (@supriyasahuias) December 31, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...