ಛತ್ತೀಸ್‌ಗಢ ಕೇಡರ್‌ನ ಐಎಎಸ್ ಅಧಿಕಾರಿ ಅವನೀಶ್ ಶರಣ್ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುವ ಪೋಸ್ಟ್ ಹಾಕುತ್ತಿರುತ್ತಾರೆ. ಅವರೀಗ ತಮ್ಮ ಹತ್ತನೇ ತರಗತಿ ಅಂಕಪಟ್ಟಿಯನ್ನು ಬಹಿರಂಗ ಪಡಿಸಿ ಅಚ್ಚರಿ ಮೂಡಿಸಿದ್ದಾರೆ.
ಅವರು 1996 ರಲ್ಲಿ ಬಿಹಾರ ಬೋರ್ಡ್‌ನಿಂದ ಹತ್ತನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ ಎಂಬುದನ್ನು ಅಂಕಪಟ್ಟಿ ತೋರಿಸುತ್ತದೆ. 700 ಅಂಕಗಳಿಗೆ 314 ಅಂಕಗಳನ್ನು ಗಳಿಸಿದ್ದು, 44.85 ಶೇಕಡಾ ಸರಾಸರಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಅವರ ಟ್ವೀಟ್ ಸುಮಾರು 32,000 ಲೈಕ್ ಮತ್ತು ಸಾವಿರಾರು ಶೇರ್‌ಗಳನ್ನು ಪಡೆದಿವೆ. ಅನೇಕರು ಈ ಪೋಸ್ಟ್‌ನಿಂದ ಸ್ಫೂರ್ತಿ ಪಡೆದಿದ್ದಾರೆ. ಹಾಗೆಯೇ ಕಡಿಮೆ ಅಂಕಗಳನ್ನು ಹೊಂದಿದ್ದರೂ ಸಹ ಯೂನಿಯನ್ ಪಬ್ಲಿಕ್ ಸರ್ವಿಸ್ ಪರೀಕ್ಷೆಯಲ್ಲಿ ಹೇಗೆ ಆಯ್ಕೆ ಮಾಡಿದರು ಎಂದು ಶರಣ್ ಅವರನ್ನು ಪ್ರಶ್ನಿಸಿದ್ದಾರೆ.
“ನಾನು 1996ರಲ್ಲಿ ಅದೇ ಪರೀಕ್ಷೆಯಲ್ಲಿ 65% ಗಳಿಸಿದ್ದೆ. ನನ್ನ ಶಾಲೆಯ ಟಾಪರ್ 75% ಕ್ಕಿಂತ ಹೆಚ್ಚು ಅಂಕ ಪಡೆದಿದ್ದರಿಂದ ಆ ಸಮಯದಲ್ಲಿ ತುಂಬಾ ದುಃಖವಾಯಿತು. ಇಂದು ಅದಕ್ಕೆ ಯಾವುದೇ ಮೌಲ್ಯವಿಲ್ಲ ಎಂದು ಭಾವಿಸುವೆ. ಟಾಪರ್ ಆದ ವ್ಯಕ್ತಿ ಮತ್ತು ನನಗೆ ಯಶಸ್ಸಿನ ವಿಷಯದಲ್ಲಿ ಹೆಚ್ಚಿನ ಅಂತರವಿಲ್ಲ” ಎಂದು ಟ್ವೀಟರ್ ಬಳಕೆದಾರರೊಬ್ಬರು ಶರಣ್ ಅವರಿಗೆ ಪ್ರತಿಕ್ರಿಯೆ ನೀಡಿದ್ದಾರೆ.
ಇತ್ತೀಚಿನ ಟ್ವೀಟ್‌ನಲ್ಲಿ ಶರಣ್ ಅವರು ಯುಪಿಎಸ್ಸಿಗಾಗಿ ಅಧ್ಯಯನ ಮಾಡುವಾಗ ತಮ್ಮ ನೆಚ್ಚಿನ ಪುಸ್ತಕದ ಚಿತ್ರವನ್ನು ಹಂಚಿಕೊಂಡಿದ್ದರು.