ನವದೆಹಲಿ: ಭವಿಷ್ಯಕ್ಕಾಗಿ ಹೂಡಿಕೆ ಮಾಡುವುದು ಯಾವಾಗಲೂ ಒಳ್ಳೆಯದು ಮತ್ತು ಭಾರತೀಯ ನಾಗರಿಕರು ಆಯ್ಕೆ ಮಾಡಲು ವ್ಯಾಪಕವಾದ ಹೂಡಿಕೆ ಆಯ್ಕೆಗಳನ್ನು ಹೊಂದಿದ್ದಾರೆ. ವಿಮೆಯಲ್ಲಿ ಹೂಡಿಕೆ ಮಾಡುವುದು ಒಬ್ಬರ ಭವಿಷ್ಯವನ್ನು ಮತ್ತು ಒಬ್ಬರ ಕುಟುಂಬದ ಭವಿಷ್ಯವನ್ನು ಸುರಕ್ಷಿತವಾಗಿ ಇರಿಸುತ್ತದೆ.
ಅದರಲ್ಲಿ ಒಂದು ಧನ್ ವರ್ಷ 866 ಯೋಜನೆ. ನೀವು ರೂ. 10 ಲಕ್ಷದ ಒಂದು ಪ್ರೀಮಿಯಂ ಅನ್ನು ಪಾವತಿಸಬಹುದು ಮತ್ತು ಡೆತ್ ಬೆನಿಫಿಟ್ ಪಡೆಯಬಹುದು.
ಪ್ರಯೋಜನಗಳು: ಈ ಯೋಜನೆಯಲ್ಲಿ ಪಾಲಿಸಿ ಆರಂಭವಾದ ದಿನದಿಂದಲೇ ಡೆತ್ ಬೆನಿಫಿಟ್ ಪಡೆಯಬಹುದಾಗಿದೆ. ಮೆಚ್ಯೂರಿಟಿಗೂ ಮುನ್ನ ಮರಣ ಸಂಭವಿಸಿದಲ್ಲಿ ಖಾತರಿಪಡಿಸಿದ ಪ್ರತಿಫಲದ ಮೊತ್ತಕ್ಕಿಂತಲೂ (Guaranteed Additions) ಹೆಚ್ಚಿನ ಡೆತ್ ಬೆನಿಫಿಟ್ ನಿಗದಿಪಡಿಸಲಾಗಿದೆ.
ಈ ಯೋಜನೆಯಲ್ಲಿ ಮೆಚ್ಯೂರಿಟಿ ಪೂರ್ತಿಯಾದಾಗ ಮೂಲ ಮೊತ್ತದ ಜತೆಗೆ ಖಾತರಿಪಡಿಸಿದ ಪ್ರತಿಫಲದ ಮೊತ್ತವನ್ನೂ ಪಡೆಯಬಹುದಾಗಿದೆ. ಪಾಲಿಸಿಯ ಪ್ರತಿ ವರ್ಷದ ಕೊನೆಗೆ ಖಾತರಿಪಡಿಸಿದ ಪ್ರತಿಫಲದ ಮೊತ್ತವು ಸೇರ್ಪಡೆಯಾಗುತ್ತದೆ. ಇದು ನಮ್ಮ ಪಾಲಿಸಿ ಆಯ್ಕೆ, ಮೂಲ ಮೊತ್ತ ಹಾಗೂ ಪಾಲಿಸಿಯ ಅವಧಿಗೆ ಅನುಗುಣವಾಗಿ ಪಾಲಿಸಿಯ ಮೆಚ್ಯೂರಿಟಿ ಅವಧಿಯವರೆಗೂ ಮುಂದುವರಿಯುತ್ತದೆ.
15 ವರ್ಷ ಅವಧಿಯ ಪಾಲಿಸಿ ಹೊಂದಲು ಕನಿಷ್ಠ 3 ವರ್ಷ ವಯಸ್ಸಾಗಿರಬೇಕು. 10 ವರ್ಷ ಅವಧಿಯ ಪಾಲಿಸಿಗೆ ಕನಿಷ್ಠ 8 ವರ್ಷ ವಯಸ್ಸಾಗಿರಬೇಕು ಎಂದು ಎಲ್ಐಸಿ ತಿಳಿಸಿದೆ.
ಪಾಲಿಸಿ ಅವಧಿ ಆರಂಭಗೊಂಡ ಮೂರು ತಿಂಗಳು ಅಥವಾ ಫ್ರೀ ಲುಕ್ (Free-Look Period) ಅವಧಿಯ ಮುಕ್ತಾಯ ಈ ಎರಡರಲ್ಲಿ ಮೊದಲು ಯಾವುದು ಬರಲಿದೆಯೋ ಆ ದಿನಾಂಕದ ಬಳಿಕ ಸಾಲ ಸೌಲಭ್ಯವೂ ದೊರೆಯುತ್ತದೆ.