ಯುಗಾದಿ ಹಬ್ಬದ ಸಂಭ್ರಮದಲ್ಲಿ ಸ್ಯಾಮ್‌ಸಂಗ್ ಕಂಪನಿಯು ತನ್ನ ಗ್ರಾಹಕರಿಗೆ ಭರ್ಜರಿ ಕೊಡುಗೆಗಳನ್ನು ನೀಡುತ್ತಿದೆ. ಮನೆಯ ಮನರಂಜನಾ ವ್ಯವಸ್ಥೆಯನ್ನು ಅತ್ಯುನ್ನತಗೊಳಿಸಲು ಸ್ಯಾಮ್‌ಸಂಗ್‌ನ ಪ್ರೀಮಿಯಂ ಎಐ ದೊಡ್ಡ ಸ್ಕ್ರೀನ್ ಟಿವಿಗಳಾದ ನಿಯೋ ಕ್ಯೂಎಲ್‌ಇಡಿ 8ಕೆ, ನಿಯೋ ಕ್ಯೂಎಲ್‌ಇಡಿ 4ಕೆ, ಓಎಲ್‌ಇಡಿ ಮತ್ತು ಕ್ರಿಸ್ಟಲ್ 4ಕೆ ಯುಎಚ್‌ಡಿ ಟಿವಿ ಮಾಡೆಲ್‌ಗಳ ಮೇಲೆ ವಿಶೇಷ ಆಫರ್‌ಗಳನ್ನು ಘೋಷಿಸಿದೆ.
ಮಾರ್ಚ್ 5 ರಿಂದ ಮಾರ್ಚ್ 31, 2025 ರವರೆಗೆ ನಡೆಯುವ ಈ ಹಬ್ಬದ ಅಭಿಯಾನವು ಗ್ರಾಹಕರಿಗೆ ತಮ್ಮ ಮನೆಯ ಮನರಂಜನಾ ವ್ಯವಸ್ಥೆಯನ್ನು ಅಪ್‌ಗ್ರೇಡ್ ಮಾಡಲು ಸೂಕ್ತ ಅವಕಾಶವಾಗಿದೆ. ಎಐ ತಂತ್ರಜ್ಞಾನ ಬಳಸಿಕೊಂಡು ಅತ್ಯುತ್ತಮ ಚಿತ್ರ ಗುಣಮಟ್ಟ, ಆಕರ್ಷಕ ಧ್ವನಿ ವ್ಯವಸ್ಥೆ ಮತ್ತು ಸೊಗಸಾದ ವಿನ್ಯಾಸವನ್ನು ಹೊಂದಿರುವ ಸ್ಯಾಮ್‌ಸಂಗ್‌ನ ಪ್ರೀಮಿಯಂ ಟಿವಿಗಳು ಗ್ರಾಹಕರನ್ನು ಬೆರಗುಗೊಳಿಸುತ್ತವೆ.
ಈ ವಿಶೇಷ ಆಫರ್‌ನಲ್ಲಿ ಗ್ರಾಹಕರು ಆಯ್ದ ಖರೀದಿಗಳ ಮೇಲೆ ₹2,04,990 ಮೌಲ್ಯದ ವರೆಗಿನ ಉಚಿತ ಟಿವಿ ಅಥವಾ ₹90,990 ಮೌಲ್ಯದ ಉಚಿತ ಸೌಂಡ್ ಬಾರ್ ಅನ್ನು ಪಡೆಯಬಹುದು. ಜೊತೆಗೆ ಸ್ಯಾಮ್‌ಸಂಗ್ ಶೇ.20ರವರೆಗೆ ಕ್ಯಾಶ್‌ಬ್ಯಾಕ್, ಶೂನ್ಯ ಮುಂಗಡ ಪಾವತಿ ಮತ್ತು ಕೇವಲ ₹2,990 ರಿಂದ ಪ್ರಾರಂಭವಾಗುವ 30 ತಿಂಗಳವರೆಗಿನ ಸುಲಭ ಇಎಂಐ ಆಯ್ಕೆಗಳನ್ನು ಕೂಡ ನೀಡುತ್ತಿದೆ. ಯಾವುದೇ ಸ್ಯಾಮ್‌ಸಂಗ್ ಟಿವಿ ಖರೀದಿಸಿದಾಗ ಸ್ಯಾಮ್‌ಸಂಗ್ ಸೌಂಡ್‌ಬಾರ್‌ಗಳ ಮೇಲೆ ಶೇ.45ರವರೆಗೆ ರಿಯಾಯಿತಿ ಲಭ್ಯವಿದ್ದು, ಇದು ಸಿನಿಮಾ ಮನರಂಜನಾ ವ್ಯವಸ್ಥೆಯನ್ನು ಅಪ್‌ಗ್ರೇಡ್ ಮಾಡಲು ಸೂಕ್ತ ಅವಕಾಶವಾಗಿದೆ.
ಈ ಆಫರ್‌ಗಳು Samsung.com, ಪ್ರಮುಖ ಆನ್‌ಲೈನ್ ಪೋರ್ಟಲ್‌ಗಳು ಮತ್ತು ಭಾರತದಾದ್ಯಂತ ಇರುವ ಆಯ್ದ ಸ್ಯಾಮ್‌ಸಂಗ್ ರಿಟೇಲ್ ಮಳಿಗೆಗಳಲ್ಲಿ ಲಭ್ಯವಿರುತ್ತವೆ.
ಸ್ಯಾಮ್‌ಸಂಗ್‌ನ ಹೊಸ ಆಫರ್‌ಗಳು ಎಐ ತಂತ್ರಜ್ಞಾನ ಹೊಂದಿರುವ ಅತ್ಯುತ್ತಮ ಟಿವಿಗಳನ್ನು ಸುಲಭವಾಗಿ ಲಭ್ಯವಾಗಿಸಲು ನೆರವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಪ್ರೀಮಿಯಂ ಟಿವಿ ಶ್ರೇಣಿಯು ಎಐ ಸಾಮರ್ಥ್ಯ, ನೈಜವಾದ ಬಣ್ಣ ನಿಖರತೆ ಮತ್ತು ಉತ್ತಮ ಧ್ವನಿ ಗುಣಮಟ್ಟದ ಜೊತೆಗೆ ಆಕರ್ಷಕ ದೃಶ್ಯಗಳನ್ನು ಒದಗಿಸುತ್ತದೆ. ಡಾಲ್ಬಿ ಅಟ್ಮಾಸ್ ಮತ್ತು ಕ್ಯೂ-ಸಿಂಫನಿ ವ್ಯವಸ್ಥೆಯನ್ನು ಹೊಂದಿರುವ ಈ ಸ್ಯಾಮ್‌ಸಂಗ್ ಟಿವಿಗಳು ಬಹುಆಯಾಮದ ಆಡಿಯೋ ಸೌಲಭ್ಯ ನೀಡುತ್ತವೆ. ಪ್ರತೀ ದೃಶ್ಯ ವೀಕ್ಷಣೆಯನ್ನೂ ರೋಮಾಂಚಕವಾಗಿಸುತ್ತವೆ. ಸ್ಯಾಮ್‌ಸಂಗ್ ನಾಕ್ಸ್ ಭದ್ರತಾ ವ್ಯವಸ್ಥೆ ಇರುವುದರಿಂದ ಬಳಕೆದಾರರು ಸುರಕ್ಷಿತ ಸ್ಮಾರ್ಟ್ ಟಿವಿ ಅನುಭವವನ್ನು ಪಡೆಯಬಹುದು.
ಸ್ಯಾಮ್‌ಸಂಗ್‌ನ ಹಬ್ಬದ ಅಭಿಯಾನವು ಹೊಸತನಕ್ಕೆ ಮತ್ತು ಗ್ರಾಹಕರ ಸಂತೋಷಕ್ಕೆ ಸಂಸ್ಥೆಯು ಬದ್ಧವಾಗಿರುವುದನ್ನು ತೋರಿಸುತ್ತದೆ. ಉತ್ತಮ ತಂತ್ರಜ್ಞಾನ, ವಿನ್ಯಾಸ ಮತ್ತು ಮೌಲ್ಯವನ್ನು ನೀಡುತ್ತದೆ. ಈ ಆಫರ್‌ಗಳು ನಿಯೋ ಕ್ಯೂಎಲ್‌ಇಡಿ 8ಕೆ, ನಿಯೋ ಕ್ಯೂಎಲ್‌ಇಡಿ 4ಕೆ, ಓಎಲ್‌ಇಡಿ ಮತ್ತು ಕ್ರಿಸ್ಟಲ್ 4ಕೆ ಯುಎಚ್‌ಡಿ ಟಿವಿ ಶ್ರೇಣಿಗಳ 55 ಇಂಚು ಮತ್ತು ಅದಕ್ಕಿಂತ ಹೆಚ್ಚಿನ ಗಾತ್ರದ ಟಿವಿಗಳ ಮೇಲೆ ಲಭ್ಯವಿರುತ್ತದೆ.