ಸುಪ್ರಿಯಾ ಲೈಫ್‌ಸೈನ್ಸ್ ನ ಷೇರುಗಳು ಇಂದು ದೊಡ್ಡ ಮಟ್ಟದಲ್ಲಿ ಲಿಸ್ಟಿಂಗ್ ಆಗಿದೆ. ಈ ಫಾರ್ಮಾದ ಎಪಿಐ ಮ್ಯಾನಿಫೆಕ್ಚರಿಂಗ್ ಷೇರುಗಳು ಶೇಕಡಾ 55.11 ರಷ್ಟು ಜಿಗಿತದೊಂದಿಗೆ 425 ರೂಪಾಯಿಯಾಗಿದೆ. ಇದ್ರ ಪ್ರತಿ ಷೇರಿನ ಬೆಲೆ 274 ರೂಪಾಯಿಯಾಗಿತ್ತು. ಅಂದ್ರೆ ಮೂಲ ಬೆಲೆಗಿಂತ 151 ರೂಪಾಯಿ ಏರಿಕೆಯಾಗಿದೆ.
ಸುಪ್ರಿಯಾ ಲೈಫ್‌ಸೈನ್ಸ್ ನ 700 ಕೋಟಿ ರೂಪಾಯಿಗಳ ಐಪಿಒದಲ್ಲಿ ತಾಜಾ ಷೇರುಗಳ ವಿತರಣೆಯ ಜೊತೆಗೆ, ಮಾರಾಟಕ್ಕೆ ಆಫರ್ ಕೂಡ ಇತ್ತು. ಸುಪ್ರಿಯಾ ಲೈಫ್‌ಸೈನ್ಸ್ ನ 700 ಕೋಟಿ ರೂಪಾಯಿ ಐಪಿಒ ಡಿಸೆಂಬರ್ 16 ರಂದು ಪ್ರಾರಂಭವಾಗಿತ್ತು.
ಹೂಡಿಕೆದಾರರಿಗೆ ಡಿಸೆಂಬರ್ 20 ರವರೆಗೆ ಹೂಡಿಕೆ ಮಾಡಲು ಅವಕಾಶವಿತ್ತು. ಐಪಿಒ ಅಡಿಯಲ್ಲಿ, 200 ಕೋಟಿ ರೂಪಾಯಿ ಮೌಲ್ಯದ ಹೊಸ ಷೇರುಗಳನ್ನು ಮಾರಾಟಮಾಡಲಾಗಿದೆ.
ಸುಪ್ರಿಯಾ ಲೈಫ್‌ಸೈನ್ಸ್ ಕಂಪನಿ ಎಪಿಐ ಗಳನ್ನು ತಯಾರಿಸುವ ಮತ್ತು ಪೂರೈಸುವ ಕಂಪನಿಯಾಗಿದೆ. ಅಕ್ಟೋಬರ್ 31,2021 ರವರೆಗೆ ಲಭ್ಯವಿರುವ ಡೇಟಾದ ಪ್ರಕಾರ, ಕಂಪನಿಯು 38 ಎಪಿಐಗಳನ್ನು ತಯಾರಿಸುತ್ತದೆ. ಏಪ್ರಿಲ್ 1, 2021 ರಿಂದ ಅಕ್ಟೋಬರ್ 31, 2021 ರವರೆಗೆ, ಕಂಪನಿಯ ಉತ್ಪನ್ನಗಳನ್ನು 86 ದೇಶಗಳಲ್ಲಿ 346 ವಿತರಕರು ಸೇರಿದಂತೆ 1296 ಗ್ರಾಹಕರಿಗೆ ರಫ್ತು ಮಾಡಲಾಗಿದೆ.
ಕಂಪನಿಯ ಎಪಿಐ ವ್ಯವಹಾರವು ಯುರೋಪ್, ಲ್ಯಾಟಿನ್ ಅಮೇರಿಕಾ, ಏಷ್ಯಾ ಮತ್ತು ಉತ್ತರ ಅಮೆರಿಕಾದಾದ್ಯಂತ ಹರಡಿದೆ. ಕಂಪನಿಯ ನಿವ್ವಳ ಲಾಭ ನಿರಂತರವಾಗಿ ಹೆಚ್ಚುತ್ತಿದೆ. 2019 ರ ಹಣಕಾಸು ವರ್ಷದಲ್ಲಿ ಕಂಪನಿಯು 39.42 ಕೋಟಿ ರೂಪಾಯಿ ನಿವ್ವಳ ಲಾಭವನ್ನು ಹೊಂದಿದ್ದು, 2020ರಲ್ಲಿ 73.37 ಕೋಟಿಗೆ ಏರಿಕೆಯಾಗಿದೆ.