ಈ ಯೋಜನೆಯಲ್ಲಿ ಏರ್ ಫೈಬರ್ ಬಳಕೆದಾರರಿಗೆ ವೇಗದ 500GB ಡೇಟಾವನ್ನು ಒದಗಿಸುತ್ತದೆ. ಆದರೆ ಇದು ಒಂದೇ ಬಿಲ್ಲಿಂಗ್ ಸೈಕಲ್ ನಲ್ಲಿ ಮಾತ್ರವೇ ಬಳಕೆಗೆ ಮಾನ್ಯವಾಗಿದೆ.
ರೂ. 101 ಡೇಟಾ ಬೂಸ್ಟರ್ ಯೋಜನೆ:
ಈ ಯೋಜನೆಯಲ್ಲಿ ಏರ್ ಫೈಬರ್ ಬಳಕೆದಾರರಿಗೆ ವೇಗದ 100GB ಡೇಟಾವನ್ನು ನೀಡುತ್ತದೆ. ಆದರೆ ಇದು ಒಂದೇ ಬಿಲ್ಲಿಂಗ್ ಸೈಕಲ್ ನಲ್ಲಿ ಮಾತ್ರವೇ ಬಳಕೆಗೆ ಮಾನ್ಯವಾಗಿದೆ.
ಹೆಸರೇ ಸೂಚಿಸುವಂತೆ, ಇದು ಡೇಟಾ ಬೂಸ್ಟರ್ ಯೋಜನೆಯಾಗಿದೆ ಮತ್ತು ಇದನ್ನು ಬಳಕೆ ಮಾಡಿಕೊಳ್ಳಲು ಸಾಮಾನ್ಯ ಜಿಯೋ ಏರ್ಫೈಬರ್ ಅಥವಾ ಜಿಯೋ ಏರ್ಫೈಬರ್ಮ್ಯಾಕ್ಸ್ ಯೋಜನೆಯನ್ನು ಹೊಂದಿರಬೇಕು. ಸೀಮಿತ ಅವಧಿಗೆ ಹೆಚ್ಚುವರಿ ಡೇಟಾ ಅಗತ್ಯವಿರುವ ಬಳಕೆದಾರರಿಗಾಗಿ ಹೊಸ ಯೋಜನೆ ಸಹಾಯಕಾರಿಯಾಗಲಿದೆ.
ಜಿಯೋ ಏರ್ಫೈಬರ್ ಭೌತಿಕ ಸಂಪರ್ಕವಿಲ್ಲದ ಜಿಯೋ ಫೈಬರ್ನಂತಿಯೇ ಕೆಲಸ ಮಾಡಲಿದೆ. ಸೇವೆಯ ಚಂದಾದಾರರು ನಿಮ್ಮ ಮನೆ ಅಥವಾ ವ್ಯಾಪಾರದ ಆವರಣದಲ್ಲಿ ಸವೈಫೈ ರೂಟರ್, 4K ಸ್ಮಾರ್ಟ್ ಸೆಟ್ ಟಾಪ್ ಬಾಕ್ಸ್ ಮತ್ತು ಧ್ವನಿ-ಸಕ್ರಿಯ ರಿಮೋಟ್ ಬಳಕೆಯ ಲಾಭವನ್ನು ಪಡೆಯಬಹುದಾಗಿದೆ.
ಜಿಯೋ ಏರ್ಫೈಬರ್ಬಳಕೆದಾರರು ಪ್ರಮುಖ ಓಟಿಟಿ(OTT) ಅಪ್ಲಿಕೇಶನ್ಗಳಿಗೆ ಉಚಿತ ಪ್ರವೇಶವನ್ನು ಪಡೆಯುತ್ತಾರೆ. ಬಳಕೆದಾರರು ಈ ಚಂದಾದಾರಿಕೆಯನ್ನು ಟಿವಿ, ಲ್ಯಾಪ್ಟಾಪ್, ಮೊಬೈಲ್ ಅಥವಾ ಟ್ಯಾಬ್ಲೆಟ್ನಂತಹ ಅವರ ಆಯ್ಕೆಯ ಯಾವುದೇ ಸಾಧನದಾದ್ಯಂತ ಬಳಸಬಹುದು. ಭಾರತದಲ್ಲಿ ಜಿಯೋ ಏರ್ಫೈಬರ್ ಸಬ್ಸ್ಕ್ರಿಪ್ಶನ್ ಬೆಲೆಯು ರೂ. 599 ರಿಂದ ಪ್ರಾರಂಭವಾಗುತ್ತದೆ.