ಹೋಂಡಾ ಕಾರ್ಸ್ ಇಂಡಿಯಾ ಹಬ್ಬದ ಋತುವಿನ ಹಿನ್ನೆಲೆಯಲ್ಲಿ ತನ್ನ ಕಾರುಗಳ ಮೇಲೆ ಭಾರಿ ರಿಯಾಯಿತಿ ನೀಡುತ್ತಿದೆ. ಅಕ್ಟೋಬರ್ ತಿಂಗಳು ಪೂರ್ತಿ ಹೋಂಡಾ ಕಂಪನಿಯ ವಾಹನಗಳ ಮೇಲೆ ಗ್ರಾಹಕರು ಭರ್ಜರಿ ಡಿಸ್ಕೌಂಟ್ ಪಡೆಯಬಹುದು.
ನಗದು ರಿಯಾಯಿತಿ, ಕಾರ್ಪೊರೇಟ್ ಆಫರ್ಸ್, ಎಕ್ಸ್‌ಚೇಂಜ್ ಆಫರ್ಸ್ ಸೇರಿದಂತೆ ಇತರ ಹಲವು ಬಗೆಯ ಕೊಡುಗೆಗಳ ಮೂಲಕ ಹೋಂಡಾ ಕಂಪನಿ ಗ್ರಾಹಕರನ್ನು ಆಕರ್ಷಿಸುತ್ತಿದೆ. ಆದರೆ ರಿಯಾಯಿತಿ ಸೇರಿದಂತೆ ಇತರ ಆಫರ್‌ಗಳು ಲಭ್ಯವಿರೋದು ಹೋಂಡಾ ಸಿಟಿ ಮತ್ತು ಹೋಂಡಾ ಅಮೇಜ್ ಕಾರುಗಳಿಗೆ ಮಾತ್ರ.
ಇತ್ತೀಚೆಗೆ ಬಿಡುಗಡೆಯಾದ ಹೋಂಡಾ ಎಲಿವೇಟ್ ಮೇಲೆ ಯಾವುದೇ ಆಫರ್ ನೀಡಲಾಗುತ್ತಿಲ್ಲ. ಅಕ್ಟೋಬರ್ ತಿಂಗಳಲ್ಲಿ, ಹೋಂಡಾ ಸಿಟಿ ಮತ್ತು ಹೋಂಡಾ ಅಮೇಜ್ ಕಾರು ಕೊಳ್ಳುವವರು 75,000 ರೂಪಾಯಿವರೆಗೆ ಉಳಿತಾಯ ಮಾಡಬಹುದು.
ಹೋಂಡಾ ಸಿಟಿ ಮೇಲೆ ರಿಯಾಯಿತಿ
ಈ ತಿಂಗಳು ಹೋಂಡಾ ಸಿಟಿ ಪೆಟ್ರೋಲ್ ಕಾರಿನ ಮೇಲೆ 75,000 ರೂಪಾಯಿವರೆಗೆ ರಿಯಾಯಿತಿ ಲಭ್ಯವಿದೆ. ಈ ರಿಯಾಯಿತಿಯನ್ನು ನಗದು ರಿಯಾಯಿತಿ, ಬಿಡಿಭಾಗಗಳು, ಲಾಯಲ್ಟಿ ಬೋನಸ್ ಮತ್ತು ಕಾರು ವಿನಿಮಯ ಇತ್ಯಾದಿ ರೂಪದಲ್ಲಿ ನೀಡಲಾಗುತ್ತಿದೆ. ಇದರಲ್ಲಿ 25,000 ರೂಪಾಯಿವರೆಗಿನ ನಗದು ರಿಯಾಯಿತಿ ಅಥವಾ 26,947 ರೂಪಾಯಿ ಬೆಲೆಬಾಳುವ ಉಚಿತ ಬಿಡಿಭಾಗಗಳು, 4,000 ರೂಪಾಯಿ ಗ್ರಾಹಕ ಲಾಯಲ್ಟಿ ಬೋನಸ್, 6,000 ರೂಪಾಯಿ ಹೋಂಡಾ ಕಾರು ವಿನಿಮಯ ಬೋನಸ್, 5,000 ರೂಪಾಯಿ ಕಾರ್ಪೊರೇಟ್ ರಿಯಾಯಿತಿ ಹೀಗೆ ಹಲವು ಆಫರ್‌ಗಳಿವೆ. ಆದರೆ ಈ ಕೊಡುಗೆಯು ಹೋಂಡಾ ಸಿಟಿ ಹೈಬ್ರಿಡ್‌ನಲ್ಲಿ ಲಭ್ಯವಿಲ್ಲ.
ಹೋಂಡಾ ಅಮೇಜ್ ಮೇಲೆ ರಿಯಾಯಿತಿ
ಹೋಂಡಾ ಅಮೇಜ್ ಕಾರಿನ ಮೇಲೆ ಕೂಡ ಆಕರ್ಷಕ ರಿಯಾಯಿತಿ ಕೊಡುಗೆಗಳಿವೆ. ಅಕ್ಟೋಬರ್‌ನಲ್ಲಿ ಇದರ ಮೇಲೆ 57,000 ರೂಪಾಯಿವರೆಗಿನ ಕೊಡುಗೆಗಳನ್ನು ನೀಡಲಾಗುತ್ತಿದೆ. ಇದರಲ್ಲಿ 15,000 ರೂಪಾಯಿವರೆಗಿನ ನಗದು ರಿಯಾಯಿತಿ, 18,147 ರೂಪಾಯಿ ಬೆಲೆಬಾಳುವ ಉಚಿತ ಬಿಡಿಭಾಗಗಳು, 4,000 ರೂಪಾಯಿ ಗ್ರಾಹಕ ಲಾಯಲ್ಟಿ ಬೋನಸ್, 3,000 ಕಾರ್ಪೊರೇಟ್ ರಿಯಾಯಿತಿ, 20,000 ರೂಪಾಯಿ ಮೊತ್ತದ ವಿಶೇಷ ಕಾರ್ಪೊರೇಟ್ ಡಿಸ್ಕೌಂಟ್, 15,000 ರೂಪಾಯಿ ಕಾರು ವಿನಿಮಯ ಬೋನಸ್ ಲಭ್ಯವಿದೆ. ನವರಾತ್ರಿ ಪ್ರಯುಕ್ತ ಕಂಪನಿ ಈ ಆಫರ್‌ಗಳನ್ನು ಪ್ರಕಟಿಸಿದೆ.