
ಚಂಡೀಗಢ: ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿ ಸಮೀಪ ಬಿಎಸ್ಎಫ್ ಯೋಧರ ಕ್ಯಾಂಟೀನ್ ನಲ್ಲಿ ಗುಂಡಿನ ದಾಳಿ ನಡೆದಿದ್ದು, ಐದು ಮಂದಿ ಯೋಧರು ಮೃತಪಟ್ಟಿದ್ದಾರೆ.
ಅಟ್ಟಾರಿ -ವಾಘಾ ಗಡಿಗೆ ಹೊಂದಿಕೊಂಡಂತೆ ಸುಮಾರು 20 ಕಿಲೋಮೀಟರ್ ದೂರದಲ್ಲಿರುವ ಗಡಿ ಪ್ರದೇಶದ ಬಿಎಸ್ಎಫ್ ಯೋಧರ ಕ್ಯಾಂಟೀನ್ ನಲ್ಲಿ ಜವಾನರೊಬ್ಬರು ಗುಂಡಿನ ದಾಳಿ ನಡೆಸಿದ್ದು, ಐವರು ಗಾಯಗೊಂಡಿದ್ದಾರೆ. ಸಹೋದ್ಯೋಗಿ ಗುಂಡು ಹಾರಿಸಿ ಐವರನ್ನು ಕೊಂದಿದ್ದು, ಸ್ಥಳಕ್ಕೆ ಹಿರಿಯ ಅಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.