ಮೈಸೂರು: ಮೈಸೂರು- ಬೆಂಗಳೂರು-ಚೆನ್ನೈ ಹೈಸ್ಪೀಡ್ ಬುಲೆಟ್ ರೈಲು ಯೋಜನೆ ಮತ್ತಷ್ಟು ವೇಗ ಪಡೆದುಕೊಂಡಿದೆ.
ಯೋಜನೆಗೆ ಪೂರಕವಾದ ಸರ್ವೇ ಕೈಗೊಳ್ಳಲು ಆದೇಶಿಸಲಾಗಿದೆ. ಯೋಜನೆಯನ್ನು ಪರಿಷ್ಕರಿಸಲಾಗಿದ್ದು, ಯೋಜನಾ ವರದಿ ಪೂರ್ಣಗೊಳಿಸಿ ವರದಿ ಸಲ್ಲಿಕೆ ಮಾಡುವಂತೆ ರಾಷ್ಟ್ರೀಯ ಹೈಸ್ಪೀಡ್ ರೈಲು ಪ್ರಾಧಿಕಾರಕ್ಕೆ ರೈಲ್ವೆ ಇಲಾಖೆಯಿಂದ ಸೂಚನೆ ನೀಡಲಾಗಿದೆ. ಇದು ದೇಶದ ಪ್ರಮುಖ 7 ಹೈಸ್ಪೀಡ್ ರೈಲು ಯೋಜನೆಯಲ್ಲಿ ಒಂದಾಗಿದ್ದು, ದಕ್ಷಿಣ ಭಾರತದ ಏಕೈಕ ಯೋಜನೆಯಾಗಿದೆ ಎಂದು ಹೇಳಲಾಗಿದೆ.
ಪ್ರಸ್ತುತ ಮೈಸೂರಿನಿಂದ ಚೆನ್ನೈಗೆ ಸುಮಾರು 10 ರಿಂದ 11 ಗಂಟೆ ಪ್ರಯಾಣಿಸಬೇಕಿದೆ. ಬುಲೆಟ್ ರೈಲು ಸಂಚಾರ ಆರಂಭವಾದ 7 ಗಂಟೆ ಅವಧಿ ಉಳಿತಾಯವಾಗುತ್ತದೆ. ಮೈಸೂರು, ಮಂಡ್ಯ, ಚನ್ನಪಟ್ಟಣ, ಬೆಂಗಳೂರು, ಬಂಗಾರಪೇಟೆ, ಚಿತ್ತೂರು, ಅರಕೋಣಂ, ಪೊನ್ನಮಲೈ ಮಾರ್ಗವಾಗಿ ಬುಲೆಟ್ ರೈಲು ಚೆನ್ನೈ ತಲುಪಲಿದೆ. ಗಂಟೆಗೆ 350 ಕಿ.ಮೀ ವೇಗದಲ್ಲಿ ಸಾಗುವ ರೈಲಿನಲ್ಲಿ ಏಕಕಾಲಕ್ಕೆ 750 ಜನ ಪ್ರಯಾಣಿಸಬಹುದಾಗಿದೆ.