ಗಾಯಕ ಸಿಧು ಮೂಸೆ ವಾಲಾ ಹತ್ಯೆ ಪ್ರಕರಣದಲ್ಲಿ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್‌ನನ್ನು ಪಂಜಾಬ್ ನ್ಯಾಯಾಲಯವು ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.
ಹೈಪ್ರೊಫೈಲ್ ಪ್ರಕರಣದ ಪ್ರಮುಖ ಆರೋಪಿ ಮತ್ತು ಸಂಚುಕೋರ ಬಿಷ್ಣೋಯ್‌ನನ್ಮು ಬಿಗಿ ಭದ್ರತೆಯ ನಡುವೆ ಮಾನ್ಸಾದಿಂದ ಮೊಹಾಲಿಗೆ ಸಾಗಿಸಲಾಯಿತು.
ಈ ಕುಖ್ಯಾತ ಗ್ಯಾಂಗ್‌ಸ್ಟರ್‌ನನ್ನು ಬುಲೆಟ್ ಪ್ರೂಫ್ ವಾಹನದಲ್ಲಿ, ಎರಡು ಡಜನ್ ವಾಹನಗಳನ್ನು ಒಳಗೊಂಡ ಬೆಂಗಾವಲು ಪಡೆಯಲ್ಲಿ ಸುಮಾರು 100 ಪೊಲೀಸರು ಕರೆದೊಯ್ದಿದ್ದು, ಸದ್ಯಕ್ಕೆ ಆತನನ್ನು ಅಜ್ಞಾತ ಸ್ಥಳದಲ್ಲಿ ಇರಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಕರ್ತವ್ಯದಲ್ಲಿದ್ದಾಗಲೇ ಪೊಲೀಸ್ ಮಾಡಿದ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ
ಪಂಜಾಬ್ ಪೊಲೀಸ್ ರಚಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ), ಗ್ಯಾಂಗ್ ಸ್ಟರ್ ವಿರುದ್ಧದ ಕಾರ್ಯಪಡೆ ಮತ್ತು ಇತರ ಏಜೆನ್ಸಿಗಳು ಗಾಯಕ- ರಾಜಕಾರಣಿ ಸಿಧು ಮೂಸೆ ವಾಲಾ ಹತ್ಯೆಯಲ್ಲಿ ಬಿಷ್ಣೋಯ್ ಅವರ ಪಾತ್ರದ ಬಗ್ಗೆ ವಿಚಾರಣೆ ನಡೆಸುತ್ತಿವೆ.
ಪಂಜಾಬ್ ಪೊಲೀಸರು ಲಾರೆನ್ಸ್ ಬಿಷ್ಣೋಯ‌್ ನನ್ನು ಬುಧವಾರ ಮುಂಜಾನೆ ಮಾನಸಾ ನ್ಯಾಯಾಲಯದಲ್ಲಿ ಮುಖ್ಯ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ್ದರು.