ನಿದ್ರೆ ಮನುಷ್ಯನಿಗೆ ಬಹಳ ಮುಖ್ಯ. ಒಬ್ಬ ವ್ಯಕ್ತಿ ತನ್ನ ಜೀವನದ ಸುಮಾರು 25 ವರ್ಷಗಳನ್ನು ನಿದ್ದೆಯಲ್ಲಿ ಕಳೆಯುತ್ತಾನೆ. ಆದ್ರೆ ಈ ವ್ಯಕ್ತಿಯೊಬ್ಬ ನಿದ್ರೆ ಇಲ್ಲದೆ ಜೀವನ ಕಳೆದಿದ್ದಾನೆ.
ಹೌದು, ಮೊದಲನೆಯ ಮಹಾಯುದ್ಧದ ಸಮಯದಲ್ಲಿ, ಹಂಗೇರಿಯನ್ ಸೈನಿಕ ಪಾಲ್ ಕೆರ್ನ್ ಮೆದುಳಿನ ಮುಂಭಾಗದ ಹಾಲೆಗೆ ಗುಂಡು ತಗುಲಿತ್ತು. ಇದರಿಂದಾಗಿ ಆತನಿಗೆ ನಿದ್ರಿಸುವುದು ಅಸಾಧ್ಯವಾಗಿತ್ತು. ಆ ವ್ಯಕ್ತಿ ತನ್ನ ಜೀವನದುದ್ದಕ್ಕೂ ನಿದ್ರೆಯಿಲ್ಲದೆ ಕಳೆದಿದ್ದಾನೆ. ಮುಂಭಾಗದ ಹಾಲೆ ತೆಗೆದ ನಂತರ ಅವನ ದೇಹಕ್ಕೆ ಮತ್ತೆ ನಿದ್ರೆ ಏಕೆ ಬೇಕಾಗಿಲ್ಲ ಎಂದು ಇಂದಿಗೂ ಯಾರಿಗೂ ಅರ್ಥವಾಗಲಿಲ್ಲ.
ಪಾಲ್ ಕೆರ್ನ್, ಲಕ್ಷಾಂತರ ಹಂಗೇರಿಯನ್ ದೇಶವಾಸಿಗಳೊಂದಿಗೆ ಹಂಗೇರಿಯನ್ ಸೈನ್ಯಕ್ಕೆ ಸೇರಿದ್ದ. 1915 ರಲ್ಲಿ, ರಷ್ಯಾದ ವಿರುದ್ಧದ ಯುದ್ಧದ ಸಮಯದಲ್ಲಿ ರಷ್ಯಾದ ಬುಲೆಟ್ ಅವನ ತಲೆ ಹೊಕ್ಕಿತ್ತು. ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆರ್ನ್ ಬದುಕುಳಿದಿದ್ದ. ಕೆರ್ನ್ 1955 ರವರೆಗೆ ಕಣ್ಣು ರೆಪ್ಪೆ ಮಿಟುಕಿಸಲಿಲ್ಲ. ಸುಮಾರು 40 ವರ್ಷಗಳ ಕಾಲ ನಿದ್ರೆ ಮಾಡಲಿಲ್ಲ. ಕೆರ್ನ್ ಏಕೆ ನಿದ್ರೆ ಮಾಡಲಿಲ್ಲ ಎಂಬುದು ಯಾರಿಗೂ ಗೊತ್ತಾಗಲಿಲ್ಲ. ವೈದ್ಯರಿಗೂ ಈತನ ಸಮಸ್ಯೆ ಗೊತ್ತಾಗಲಿಲ್ಲ. ನಿದ್ರಾಹೀನತೆ ಮನುಷ್ಯನಿಗೆ ಅನೇಕ ಸಮಸ್ಯೆಯುಂಟು ಮಾಡುತ್ತದೆ. ಅನೇಕ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ನಿದ್ರೆಯ ಕೊರತೆಯಿಂದಾಗಿ ಭ್ರಮೆ, ವ್ಯಕ್ತಿತ್ವದಲ್ಲಿ ಬದಲಾವಣೆ ಕಾಣುತ್ತದೆ. ಆದ್ರೆ ನಿದ್ರೆ ಮಾಡದೆ ಹೋದ್ರೂ ಪಾಲ್ ಕೆರ್ನ್ 40 ವರ್ಷಗಳವರೆಗೆ ಆರಾಮಾಗಿದ್ದ. ಯಾವುದೇ ರೋಗಲಕ್ಷಣ ಕಾಣಿಸಲಿಲ್ಲ.