ಜೈಪುರ: ರಾಜಸ್ಥಾನದ ಅಲ್ವಾರ್ ಜಿಲ್ಲೆಯ ಸರಾಯ್ ಮೊಹಲ್ಲಾದಲ್ಲಿರುವ 300 ವರ್ಷಗಳಷ್ಟು ಹಳೆಯದಾದ ಶಿವ ದೇವಾಲಯವನ್ನು ಶುಕ್ರವಾರ ನೆಲಸಮಗೊಳಿಸಲಾಗಿದೆ.
ದೇವಾಲಯವನ್ನು ನೆಲಸಮಗೊಳಿಸಲು ಮುಂದಾದ ನಗರ ಪಂಚಾಯತ್ ನ ಕಾರ್ಯನಿರ್ವಾಹಕ ಅಧಿಕಾರಿ (ಇಒ), ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (ಎಸ್‌ಡಿಎಂ) ಮತ್ತು ಪುರಸಭೆಯ ರಾಜಗಢ ಶಾಸಕರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲು ದೂರು ದಾಖಲಿಸಲಾಗಿದ್ದರೂ ಇನ್ನೂ ದೂರು ದಾಖಲಾಗಿಲ್ಲ.
ಘಟನೆಯ ವಿಡಿಯೋವನ್ನು ಟ್ವಿಟರ್ ನಲ್ಲಿ ಹಂಚಿಕೊಂಡಿರುವ ಬಿಜೆಪಿ ನಾಯಕ ಅಮಿತ್ ಮಾಳವಿಯಾ, ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕರೌಲಿ ಮತ್ತು ಜಹಾಂಗೀರಪುರಿಯಲ್ಲಿನ ಜನರು ಕಣ್ಣೀರು ಸುರಿಸುವಂತೆ ಮಾಡಿದ್ದು, ಹಿಂದೂಗಳ ನಂಬಿಕೆಗೆ ಧಕ್ಕೆ ತರುತ್ತಿರುವುದು ಕಾಂಗ್ರೆಸ್‌ನ ಜಾತ್ಯತೀತತೆಯಾಗಿದೆ ಎಂದಿದ್ದಾರೆ.