alex Certify ಕೃಷಿ ಮೇಳದಲ್ಲಿ ಆಕರ್ಷಣೆಯ ಕೇಂದ್ರಬಿಂದುವಾದ ‘ಕೃಷ್ಣ’ : ಬರೋಬ್ಬರಿ 1 ಕೋಟಿ ರೂ. ಬೆಲೆಬಾಳುವ ಈ ಗೂಳಿಯ ವೀರ್ಯಕ್ಕೆ ಈಗ ಬಲು ಬೇಡಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೃಷಿ ಮೇಳದಲ್ಲಿ ಆಕರ್ಷಣೆಯ ಕೇಂದ್ರಬಿಂದುವಾದ ‘ಕೃಷ್ಣ’ : ಬರೋಬ್ಬರಿ 1 ಕೋಟಿ ರೂ. ಬೆಲೆಬಾಳುವ ಈ ಗೂಳಿಯ ವೀರ್ಯಕ್ಕೆ ಈಗ ಬಲು ಬೇಡಿಕೆ

ರಾಜಧಾನಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಕೃಷಿ ಮೇಳದಲ್ಲಿ ಸುಮಾರು 1 ಕೋಟಿ ರೂಪಾಯಿ ಮೌಲ್ಯದ ಕೃಷ್ಣ ಎಂಬ ಮೂರೂವರೆ ವರ್ಷದ ಗೂಳಿಯೊಂದು ಆಕರ್ಷಣೆಯ ಕೇಂದ್ರಬಿಂದುವಾಗಿದೆ.

ಗೂಳಿಯ ಮಾಲೀಕ ಬೋರೇಗೌಡ ನೀಡಿರುವ ಮಾಹಿತಿಯ ಪ್ರಕಾರ ಇದು ಹಳ್ಳಿಕಾರ್​ ತಳಿಗೆ ಸೇರಿದ ಗೂಳಿಯಾಗಿದೆ. ಇದನ್ನು ಎಲ್ಲಾ ತಳಿಗಳ ತಾಯಿ ಎಂದು ಕರೆಯಲಾಗುತ್ತದೆಯಂತೆ.

ಈ ತಳಿಯ ವೀರ್ಯಾಣುಗಳಿಗೂ ತುಂಬಾನೇ ಬೇಡಿಕೆ ಇದೆಯಂತೆ. ಈ ತಳಿಯ ವೀರ್ಯಾಣುಗಳನ್ನು ಪ್ರತಿ ಡೋಸ್​ಗೆ 1 ಸಾವಿರ ರೂಪಾಯಿ ಮೌಲ್ಯಕ್ಕೆ ಮಾರಾಟ ಮಾಡಲಾಗುತ್ತದೆಯಂತೆ.

ಈ ಬಾರಿಯ ಕೃಷಿ ಮೇಳಕ್ಕೆ 12 ಸಾವಿರಕ್ಕೂ ಅಧಿಕ ರೈತರು ನೋಂದಾಯಿಸಿಕೊಂಡಿದ್ದಾರೆ. ಕೃಷಿ ಮೇಳದಲ್ಲಿ ಸಾಕಷ್ಟು ಹೈಬ್ರಿಡ್​ ಹಾಗೂ ಸಾಂಪ್ರದಾಯಿಕ ತಳಿಯ ರಾಸುಗಳು ಪ್ರದರ್ಶನದಲ್ಲಿ ಇವೆ. ಕೃಷಿ ತಂತ್ರಜ್ಞಾನ, ಯಂತ್ರೋಪಕರಣ ಸೇರಿದಂತೆ ಅನೇಕ ವಸ್ತುಗಳೂ ಪ್ರದರ್ಶನದಲ್ಲಿ ಇಡಲಾಗಿದೆ.

ನಾಲ್ಕು ದಿನಗಳ ಕಾಲ ನಡೆಯಲಿರುವ ಈ ಬಾರಿಯ ಕೃಷಿ ಮೇಳದ ಮತ್ತೊಂದು ವಿಶೇಷತೆ ಅಂದರೆ ಶುಕ್ರವಾರದಂದು ಕೃಷಿ ಮೇಳಕ್ಕೆ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಬುಡಕಟ್ಟು ಮಹಿಳೆ ಚಾಲನೆ ನೀಡಿದ್ದಾರೆ. ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಆಯೋಜಿಸಿರುವ ಈ ಕೃಷಿ ಮೇಳದ ಉದ್ಘಾಟನಾ ಸಮಾರಂಭದ ವೇಳೆ ಪ್ರೇಮ ದಾಸಪ್ಪ ದೀಪ ಬೆಳಗಿದರು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...