ಬೆಂಗಳೂರು: ಜಿಂದಾಲ್ ಸಿಟಿಯಲ್ಲಿ ಮತ್ತೊಂದು ಅವಘಡ ಸಂಭವಿಸಿದೆ. 17ನೇ ಮಹಡಿಯಿಂದ ಬಿದ್ದು ಕಾರ್ಮಿಕ ಸಾವು ಕಂಡ ಘಟನೆ ನಡೆದಿದೆ.
ಉತ್ತರಪ್ರದೇಶ ಮೂಲದ ನಜೀಮುದ್ದೀನ್ (44) ಮೃತಪಟ್ಟ ಕಾರ್ಮಿಕ ಎಂದು ಹೇಳಲಾಗಿದೆ. ಮೆಟಲ್ ವಿಂಡೋಸ್ ಅಳವಡಿಸುವಾಗ ದುರ್ಘಟನೆ ಸಂಭವಿಸಿದೆ. ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಿದರಕಲ್ಲು ಬಳಿ ಇರುವ ಪ್ರಸ್ಟೀಜ್ ಜಿಂದಾಲ್ ಸಿಟಿಯಲ್ಲಿ ಘಟನೆ ನಡೆದಿದ್ದು ಜಿಂದಾಲ್ ಸಿಟಿ ಕಂಪನಿ ವಿರುದ್ಧ ಪ್ರಕರಣ ದಾಖಲಾಗಿದೆ.
ಮೇಲ್ವಿಚಾರಕ ರಾಹುಲ್ ಮತ್ತು ಗುತ್ತಿಗೆದಾರನ ವಿರುದ್ಧ ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾರ್ಚ್ 22ರಂದು ನಡೆದ ಘಟನೆಯಲ್ಲಿ ಕಾರ್ಮಿಕ ಆರನೇ ಮಹಡಿಯಿಂದ ಬಿದ್ದು ಬಾಕೇಂದ್ರ ಎಂಬ ಕಾರ್ಮಿಕ ಸಾವನ್ನಪ್ಪಿದ್ದರು.