
ಆದರೆ ಕೆಲವೊಮ್ಮೆ ನಿಯಮಬಾಹಿರವಾಗಿ ಕಟ್ಟಡ ಕಟ್ಟಿದ್ದರೆ, ದುರ್ಬಲಗೊಂಡ ನೆಲಮಾಳಿಗೆ, ದೋಷಯುಕ್ತ ಅಡಿಪಾಯ ಸೇರಿದಂತೆ ಇತರೆ ಕಾರಣಗಳಿಂದ ಅಪಾಯ ತಡೆಯಲು ಬೃಹತ್ ಕಟ್ಟಡಗಳನ್ನು ನೆಲಸಮ ಮಾಡಬೇಕಾಗುತ್ತದೆ.
ಇಂತಹ ಕಾರ್ಯಾಚರಣೆ ವೇಳೆ ಮೊದಲೇ ಯೋಜಿಸಿದಂತೆ ಕೆಲಸ ನಡೆಯದಿದ್ರೆ ಏನಾಗುತ್ತದೆ ಅನ್ನೋದಕ್ಕೆ ವಿಡಿಯೋವೊಂದು ಸಾಕ್ಷಿಯಾಗಿದೆ. ಕಟ್ಟಡವು ನೇರವಾಗಿ ಕೆಳಗೆ ಬೀಳುವ ಬದಲು ಓರೆಯಾಗಿ ಪಕ್ಕಕ್ಕೆ ಬೀಳುತ್ತದೆ. ಈ ಪ್ರಕ್ರಿಯೆಯನ್ನು ದೂರದಿಂದ ನೋಡುತ್ತಿದ್ದ ಜನ ಪ್ರಾಣ ಉಳಿಸಿಕೊಳ್ಳಲು ಓಡಿಹೋಗುತ್ತಾರೆ.
ಸಾಮಾನ್ಯವಾಗಿ ಕಟ್ಟಡಗಳನ್ನು ಸ್ಫೋಟ ಅಥವಾ ಸ್ಫೋಟದಂತಹ ವಿವಿಧ ವಿಧಾನಗಳನ್ನು ಬಳಸಿ, ಹಸ್ತಚಾಲಿತವಾಗಿ (ಕೈಯಿಂದ) ಮತ್ತು ಯಂತ್ರಗಳನ್ನು ಬಳಸುವ ಮೂಲಕ ನೆಲಸಮ ಮಾಡಲಾಗುತ್ತದೆ. ಈ ಕಾರ್ಯಾಚರಣೆ ನಡೆಸುವ ವೃತ್ತಿಪರರು ಪ್ರತಿಯೊಂದು ಸುರಕ್ಷತಾ ಕ್ರಮವನ್ನು ಬಳಸುತ್ತಾರೆ. ಆದರೆ ಕೆಲವೊಮ್ಮೆ ಇದು ಯೋಜಿಸಿದಂತೆ ನಡೆಯುವುದಿಲ್ಲ.