alex Certify ಪೊಲೀಸ್ ಠಾಣೆ ಕಟ್ಟಡದ 4ನೇ ಮಹಡಿಯಿಂದ ಬಿದ್ದು ವ್ಯಕ್ತಿ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪೊಲೀಸ್ ಠಾಣೆ ಕಟ್ಟಡದ 4ನೇ ಮಹಡಿಯಿಂದ ಬಿದ್ದು ವ್ಯಕ್ತಿ ಸಾವು

ಹಾಸನ: ಪೊಲೀಸ್ ಠಾಣೆ ಕಟ್ಟಡದ ಮೇಲಿಂದ ಬಿದ್ದು ವ್ಯಕ್ತಿ ಸಾವನ್ನಪ್ಪಿದ ಘಟನೆ ಹಾಸನ ನಗರದ ಪೊಲೀಸ್ ಸಂಕೀರ್ಣ ಕಟ್ಟಡದಲ್ಲಿ ನಡೆದಿದೆ.

ಹಾಸನದ ಎನ್.ಆರ್. ಸರ್ಕಲ್ ನಲ್ಲಿರುವ ಪೊಲೀಸ್ ಸಂಕೀರ್ಣ ಕಟ್ಟಡದ ನಾಲ್ಕನೇ ಮಹಡಿಯಿಂದ ಬಿದ್ದು ಸುನಿಲ್(30) ಸಾವನ್ನಪ್ಪಿದ್ದಾರೆ. ಸುನಿಲ್ ಹೊಳೆನರಸೀಪುರ ತಾಲೂಕಿನ ಮಲ್ಲೇನಹಳ್ಳಿಯ ನಿವಾಸಿಯಾಗಿದ್ದಾರೆ.

ಮಟನ್ ಅಂಗಡಿಯಲ್ಲಿ ಸುನಿಲ್ ಕೆಲಸ ಮಾಡುತ್ತಿದ್ದರು. ಇಂದು ಉಪಾಧೀಕ್ಷಕರ ಕಚೇರಿಗೆ ಸುನಿಲ್ ಬಂದಿದ್ದರು. ಹಾಸನ ನಗರ ಠಾಣೆ, ಗ್ರಾಮಾಂತರ ಠಾಣೆ, ಸಿಇಎನ್ ಠಾಣೆ, ಉಪಾಧೀಕ್ಷಕರ ಕಚೇರಿ ಬಳಿ ಸುತ್ತಾಡುತ್ತಿದ್ದ ಸುನಿಲ್ ನಂತರ ಕಟ್ಟಡದ ನಾಲ್ಕನೇ ಮಹಡಿಗೆ ಹೋಗಿ ಕೆಳಗೆ ಜಿಗಿದಿದ್ದಾರೆ ಎನ್ನಲಾಗಿದೆ.

ಕೂಡಲೇ ಪೊಲೀಸ್ ಸಿಬ್ಬಂದಿ ಅವರನ್ನು ಕರೆದುಕೊಂಡು ಹೋಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಕಾರಿಯಾಗದೆ ಸುನಿಲ್ ಕೊನೆಯುಸಿರೆಳೆದಿದ್ದಾರೆ. ಹಾಸನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...