alex Certify ಮಾ.24ರ ನಂತ್ರ ಈ ರಾಶಿಯವರ ಬಾಳಲ್ಲಿ ಹರಿಯಲಿದೆ ಹಣದ ಹೊಳೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾ.24ರ ನಂತ್ರ ಈ ರಾಶಿಯವರ ಬಾಳಲ್ಲಿ ಹರಿಯಲಿದೆ ಹಣದ ಹೊಳೆ

ಗ್ರಹ ನಮ್ಮ ಜೀವನದ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ. ಗ್ರಹಗಳಲ್ಲಿ ಆಗುವ ಬದಲಾವಣೆ ನಮ್ಮ ಜೀವನದಲ್ಲೂ ಶುಭ-ಅಶುಭ ಫಲಗಳನ್ನು ನೀಡುತ್ತದೆ. ಮಾರ್ಚ್ 24ರಂದು ಬುಧ ಗ್ರಹ ರಾಶಿ ಬದಲಿಸುತ್ತಿದೆ.

ಬುಧ ಗ್ರಹ ಮೀನ ರಾಶಿಯನ್ನು ಪ್ರವೇಶಿಸುತ್ತಿದೆ. ಬುಧನ ಈ ರಾಶಿ ಬದಲಾವಣೆ ಐದು ರಾಶಿಯವರ ಮೇಲಾಗಲಿದೆ. ಐದು ರಾಶಿಯವರಿಗೆ ಶುಭ ಫಲಗಳು ಪ್ರಾಪ್ತಿಯಾಗಲಿವೆ. ಕಷ್ಟಗಳು ದೂರವಾಗಿ, ಆರ್ಥಿಕ ವೃದ್ಧಿಯಾಗಲಿದೆ. ಅದೃಷ್ಟ ಒಲಿದುಬರಲಿರುವ ರಾಶಿಗಳು ಯಾವುವು ಎಂಬುದು ಇಲ್ಲಿದೆ.

ವೃಷಭ : ಬುಧ ಸಂಕ್ರಮಣವು ವೃಷಭ ರಾಶಿಯವರಿಗೆ ಬಹಳಷ್ಟು ಲಾಭವನ್ನು ತರಲಿದೆ. ಈ ರಾಶಿಯವರ ಆದಾಯ ಹೆಚ್ಚಾಗಲಿದೆ. ವೃತ್ತಿಯಲ್ಲಿ ಉನ್ನತಿ ಸಿಗಲಿದೆ. ಚಲನಚಿತ್ರ, ಮಾಧ್ಯಮ, ಮಾರ್ಕೆಟಿಂಗ್, ಮಾಡೆಲಿಂಗ್‌ಗೆ ಸಂಬಂಧಿಸಿದ ಜನರಿಗೆ ಈ ಸಮಯವು ವಿಶೇಷವಾಗಿರಲಿದೆ.

ಮಿಥುನ ರಾಶಿ : ಮಿಥುನ ರಾಶಿಯವರಿಗೆ ಬುಧನು ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ನೀಡಲಿದ್ದಾನೆ. ಹೊಸ ಉದ್ಯೋಗ ಸಿಗುವ ಸಾಧ್ಯತೆಯಿದೆ. ಉದ್ಯೋಗದಲ್ಲಿ ಬಡ್ತಿ ಸಿಗಲಿದೆ. ಒಟ್ಟಿನಲ್ಲಿ ಈ ರಾಶಿಯವರಿಗೆ ಉದ್ಯೋಗದ ಮೂಲಕ ಆರ್ಥಿಕ ನೆರವು ಸಿಗಲಿದೆ.

ಕರ್ಕಾಟಕ :  ಕರ್ಕಾಟಕ ರಾಶಿಯವರಿಗೆ ಬುಧನ ಬದಲಾವಣೆ ಮಂಗಳಕರವಾಗಲಿದೆ. ಕೆಲಸದಲ್ಲಿ ಯಶಸ್ಸು ಸಿಗಲಿದೆ. ಸ್ಥಗಿತಗೊಂಡಿದ್ದ ಕಾಮಗಾರಿಗಳು ಶೀಘ್ರವಾಗಿ ಕೊನೆಯಾಗಲಿದೆ. ಉದ್ಯೋಗದಲ್ಲಿ ಉತ್ತಮ ಫಲ ಪ್ರಾಪ್ತಿಯಾಗಲಿದೆ.

ತುಲಾ ರಾಶಿ : ಬುಧ, ತುಲಾ ರಾಶಿಯವರಿಗೆ ಉದ್ಯೋಗದಲ್ಲಿ ಯಶಸ್ಸು ನೀಡಲಿದ್ದಾನೆ. ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಸಿಗಲಿದೆ. ಈ ಸಮಯದಲ್ಲಿ ಮಾಡಿದ ಸಾಧನೆ ಭವಿಷ್ಯದಲ್ಲಿ ನಿಮಗೆ ಪ್ರಯೋಜನ ನೀಡಲಿದೆ.

ಕುಂಭ ರಾಶಿ : ಕುಂಭ ರಾಶಿಯವರಿಗೆ ಬುಧನ ರಾಶಿ ಬದಲಾವಣೆ ಶುಭ ಫಲ ನೀಡಲಿದೆ. ಉದ್ಯೋಗದಲ್ಲಿ ಪ್ರಗತಿಯಾಗಲಿದೆ. ಕೆಲಸದಲ್ಲಿ ಯಶಸ್ಸು ಸಿಗಲಿದೆ. ವಿದೇಶದಲ್ಲಿ ಕೆಲಸ ಪ್ರಾಪ್ತಿಯಾಗಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...