ನವದೆಹಲಿ: ಸಂಸತ್ ಬಜೆಟ್ ಅಧಿವೇಶನ ಜನವರಿ 31 ರಂದು ಆರಂಭವಾಗಲಿದೆ. ಮೊದಲ ದಿನದ ಕಲಾಪದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಅಂದೇ ಆರ್ಥಿಕ ಸಮೀಕ್ಷೆ ಕೂಡ ಮಂಡನೆಯಾಗಲಿದೆ. ಮರು ದಿನ ಫೆಬ್ರವರಿ 1 ರಂದು ಬೆಳಗ್ಗೆ 11 ಗಂಟೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ. ಅಧಿವೇಶನ ಆರಂಭದ ದಿನ ಮತ್ತು ಬಜೆಟ್ ಮಂಡನೆಯ ದಿನ ಪ್ರಶ್ನೋತ್ತರ ಹಾಗೂ ಶೂನ್ಯವೇಳೆ ಕಲಾಪಗಳು ಇರುವುದಿಲ್ಲ. ಫೆಬ್ರವರಿ 2 ರಿಂದ ಪ್ರಶ್ನೋತ್ತರ, ಶೂನ್ಯ ವೇಳೆ ಕಲಾಪಗಳು ನಡೆಯಲಿವೆ.