ನವದೆಹಲಿ: ಲೋಕಸಭೆ ಚುನಾವಣೆ ನಂತರ ಕೇಂದ್ರದ ಮೊದಲ ಪೂರ್ಣ ಪ್ರಮಾಣದ ಬಜೆಟ್ ಮಂಗಳವಾರ ಮಂಡನೆಯಾಗಲಿದೆ.
ಪ್ರಧಾನಿ ಮೋದಿ ನೇತೃತ್ವದ 3.4 ಸರ್ಕಾರದ ಮೊದಲ ಬಜೆಟ್ ಇದಾಗಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ದಾಖಲೆಯ ಏಳನೇ ಬಾರಿಗೆ ಬಜೆಟ್ ಮಂಡಿಸಲಿದ್ದಾರೆ. 2047ರ ವೇಳೆಗೆ ವಿಕಸಿತ ಭಾರತ ಸಾಧನೆಗೆ ಬಜೆಟ್ ಅಡಿಪಾಯ ಹಾಕಲಿದೆ.
ಬಜೆಟ್ ನಲ್ಲಿ ಮಧ್ಯಮ ವರ್ಗದವರಿಗೆ ಆದಾಯ ತೆರಿಗೆ ರಿಲೀಫ್ ಸಿಗುವ ಸಾಧ್ಯತೆ ಇದೆ. ಉದ್ಯೋಗ ಸೃಷ್ಟಿಗೆ ಒತ್ತು, ಕಿಸಾನ್ ಸಮ್ಮಾನ್ ಸಹಾಯಧನ ಹೆಚ್ಚಳ, ಕೃಷಿ, ಆರೋಗ್ಯ, ಮಹಿಳೆಯರು, ಯುವಕರಿಗೆ ಆದ್ಯತೆ ಮೂಲಸೌಕರ್ಯಕ್ಕೆ ಒತ್ತು ಸೇರಿ ಹಲವು ನಿರೀಕ್ಷೆಗಳಿವೆ.
ಕೇಂದ್ರ ಸರ್ಕಾರದ ಬಜೆಟ್ ನಲ್ಲಿ ಕರ್ನಾಟಕದ ನಿರೀಕ್ಷೆಗಳು
ಮೇಕೆದಾಟು, ಕಳಸಾ, ಎತ್ತಿನ ಹೊಳೆ ಯೋಜನೆಗಳ ಬಗ್ಗೆ ಪ್ರಸ್ತಾಪ, ತೆಂಗು ಅಭಿವೃದ್ದಿ ಮಂಡಳಿಗೆ ವಿಶೇಷ ಪ್ಯಾಕೇಜ್, ಹೋಟೆಲ್ ಉದ್ಯಮಿಗಳಿಗೆ ತೆರಿಗೆ ಹೊರೆ ಇಳಿಕೆ ನಿರೀಕ್ಷೆ ಇದೆ.
ರಾಜ್ಯದ 39 ರಸ್ತೆಗಳಿಗೆ ರಾಷ್ಟ್ರೀಯ ಹೆದ್ದಾರಿ ಆಗಿ ಬಡ್ತಿ ಸಿಗುವ ಸಾಧ್ಯತೆ ಇದೆ. 287 ಕಿಲೋಮೀಟರ್ ಉದ್ದದ ವರ್ತುಲ ರೈಲು ಯೋಜನೆ, ಬೆಂಗಳೂರು ನಗರದ ಪ್ರಮುಖ ರೈಲು ಮಾರ್ಗಗಳಿಗೆ ಸಂಪರ್ಕ, ಬೆಂಗಳೂರು ಉಪನಗರ ರೈಲು ಯೋಜನೆಗೆ ಅನುದಾನ ನೀಡುವ ಸಾಧ್ಯತೆ ಇದೆ. ನಿರೀಕ್ಷೆ ಇದೇ ರೀತಿ ರಾಜ್ಯದ ಹಲವು ರೈಲು ಮಾರ್ಗಗಳ ವಿದ್ಯುದೀಕರಣ,