alex Certify ಇಂದು 140 ಕೋಟಿ ಭಾರತೀಯರ ಬಹುನಿರೀಕ್ಷಿತ ಬಜೆಟ್: ಮಹಿಳೆಯರು, ಮಾಧ್ಯಮ ವರ್ಗ, ಬಡವರಿಗೆ ಬಂಪರ್ ಕೊಡುಗೆ ನಿರೀಕ್ಷೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂದು 140 ಕೋಟಿ ಭಾರತೀಯರ ಬಹುನಿರೀಕ್ಷಿತ ಬಜೆಟ್: ಮಹಿಳೆಯರು, ಮಾಧ್ಯಮ ವರ್ಗ, ಬಡವರಿಗೆ ಬಂಪರ್ ಕೊಡುಗೆ ನಿರೀಕ್ಷೆ

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡಿಸಲಿದ್ದಾರೆ.

140 ಕೋಟಿ ಭಾರತೀಯರ ಕನಸುಗಳನ್ನು ಈಡೇರಿಸುವ ಆಶಯ ಹೊಂದಿರುವ ಕೇಂದ್ರ ಸರ್ಕಾರದ ಬಹುನಿರೀಕ್ಷಿತ ಬಜೆಟ್ ಇದಾಗಿದ್ದು, ಈ ಬಾರಿ ಬಜೆಟ್ ಬಗ್ಗೆ ವಿವಿಧ ವಲಯಗಳು ವಿವಿಧ ನಿರೀಕ್ಷೆಯನ್ನು ಹೊಂದಿವೆ. ಬಜೆಟ್ ನಲ್ಲಿ ಪ್ರಮುಖವಾಗಿ ಮಹಿಳೆಯರು, ಬಡವರು, ಮಧ್ಯಮ ವರ್ಗಕ್ಕೆ ಹೆಚ್ಚಿನ ಆದ್ಯತೆ ನೀಡುವ ಸಾಧ್ಯತೆ ಇದೆ.

ಆದಾಯ ತೆರಿಗೆ ವಿನಾಯಿತಿ ಮಿತಿ ಹೆಚ್ಚಳ, ಆದಾಯ ತೆರಿಗೆ ಕಾಯ್ದೆ ಸರಳಿಕರಣ, ಗೃಹ ಸಾಲಗಳಿಗೆ ವಿಧಿಸುವ ತೆರಿಗೆ ವಿನಾಯಿತಿ ಮಿತಿ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಇನ್ನು ಈ ಬಾರಿ ಬಜೆಟ್ ನಲ್ಲಿ ಮಹಿಳಾ ಯೋಜನೆಗಳಿಗೆ ಉತ್ತೇಜನ ಸಿಗುವ ಸಂಭವ ಇದೆ.

ಅಲ್ಲದೇ, ಹಣದುಬ್ಬರಕ್ಕೆ ತತ್ತರಿಸಿದ ಮಾಧ್ಯಮ ವರ್ಗ ರಕ್ಷಿಸಲು ತೆರಿಗೆ ದರ ಕಡಿತ ಅಥವಾ ತೆರಿಗೆ ಸ್ತರದಲ್ಲಿ ಬದಲಾವಣೆ ಮಾಡುವ ಸಾಧ್ಯತೆ ಇದೆ. ಸಂಸತ್ತಿನ ಬಜೆಟ್ ಅಧಿವೇಶನಕ್ಕೆ ಮೊದಲು ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, ಬಡವರು ಹಾಗೂ ಮಧ್ಯಮ ವರ್ಗದವರ ಮೇಲೆ ಕೃಪೆ ತರುವಂತೆ ಲಕ್ಷ್ಮಿ ದೇವಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದು ಹೇಳಿದ್ದಾರೆ. ಅಲ್ಲದೆ ಮಹಿಳೆಯರಿಗೆ ಸಮಾನ ಅವಕಾಶ ಲಭಿಸುವಂತೆ ಅವರ ಸಶಕ್ತೀಕರಣಕ್ಕೆ ಅಗತ್ಯವಾದ ಪ್ರಮುಖ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...