alex Certify ಬಜೆಟ್ 2022: ಇಲ್ಲಿದೆ ಮಂಡನೆ ಕುರಿತಾದ ವಿಶೇಷ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಜೆಟ್ 2022: ಇಲ್ಲಿದೆ ಮಂಡನೆ ಕುರಿತಾದ ವಿಶೇಷ ಮಾಹಿತಿ

ದೇಶದ ಆರ್ಥಿಕ ಸ್ಥಿತಿಗತಿಗಳ ಅಂದಾಜಿನೊಂದಿಗೆ ಭವಿಷ್ಯದ ಪಥದ ಮುನ್ನುಡಿ ಎಂದೇ ಭಾವಿಸಲಾದ ಬಜೆಟ್ ಮಂಡನೆಗಳು ಜನಸಾಮಾನ್ಯರಿಂದ ದೊಡ್ಡ ಉದ್ಯಮಿಗಳವರೆಗೂ ಭಾರೀ ನಿರೀಕ್ಷೆಗಳು ಹಾಗೂ ಕುತೂಹಲಗಳ ಕೇಂದ್ರವಾಗಿರುತ್ತವೆ.

ನರೇಂದ್ರ ಮೋದಿ ಸರ್ಕಾರದ ಪರವಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1ರಂದು ಸಂಸತ್ತಿನಲ್ಲಿ ಬಜೆಟ್ ಮಂಡನೆ ಮಾಡಲಿದ್ದಾರೆ. ಸೀತಾರಾಮನ್ ನಾಲ್ಕನೇ ಬಾರಿ ಬಜೆಟ್ ಮಂಡನೆ ಮಾಡುತ್ತಿದ್ದು, ಈ ಬಾರಿ ಕೋವಿಡ್-19 ಸಾಂಕ್ರಮಿಕದ ಮೇಲೆ ಹೆಚ್ಚಿನ ಗಮನ ಇರುವ ಸಾಧ್ಯತೆ ಇದೆ.

‘ಮಧುಮೇಹ’ದವರಿಗೆ ಇಲ್ಲಿದೆ ನೋಡಿ ಸೂಪರ್ ಟಿಪ್ಸ್

ಫೆಬ್ರವರಿ 1ರ ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಬಜೆಟ್ ಆರಂಭಗೊಳ್ಳಲಿದೆ. 90-120 ನಿಮಿಷಗಳ ಕಾಲ ಬಜೆಟ್ ಮಂಡನೆ ಆಗುವ ಅಂದಾಜಿದೆ. ಕಳೆದ ವರ್ಷ ವಿತ್ತ ಸಚಿವೆ ಬಜೆಟ್ ಮಂಡನೆ ವೇಳೆ 2 ಗಂಟೆ 40 ನಿಮಿಷಗಳ ಕಾಲ ಭಾಷಣ ಮಾಡಿದ್ದು, ಇದು ಬ್ರಿಟಿಷ್ ನಿರ್ಗಮನ ಕಾಲದ ಭಾರತದ ಇತಿಹಾಸದಲ್ಲೇ ಅತ್ಯಂತ ಸುದೀರ್ಘಾವಧಿ ಬಜೆಟ್ ಮಂಡನೆಯಾಗಿದೆ.

ಲೋಕಸಭಾ ಟಿವಿ ಸೇರಿದಂತೆ ದೇಶದ ಬಹುತೇಕ ಸುದ್ದಿ ಮಾಧ್ಯಮಗಳು ಬಜೆಟ್ ಮಂಡನೆಯ ನೇರ ಪ್ರಸಾರ ಬಿತ್ತರಿಸಲಿವೆ. ಫೇಸ್ಬುಕ್, ಟ್ವಿಟರ್‌ ಮತ್ತು ಯೂಟ್ಯೂಬ್‌ಗಳಂಥ ಸಾಮಾಜಿಕ ಜಾಲತಾಣಗಳಲ್ಲೂ ಸಹ ಬಜೆಟ್ ಮಂಡನೆ ವೀಕ್ಷಿಸಬಹುದು.

ಕೋವಿಡ್-19 ಪೀಡಿತ ದೇಶವು ಈ ಬಾರಿ ಬಜೆಟ್‌ನಲ್ಲಿ ಆರೋಗ್ಯದ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆಯ ನಿರೀಕ್ಷೆಯಲ್ಲಿದೆ. ಕಳೆದ ವರ್ಷ ಕೋವಿಡ್-19 ಲಸಿಕೆಗಳಿಗೆಂದು ಸರ್ಕಾರವು 35,000 ಕೋಟಿ ರೂ.ಗಳನ್ನು ತೆಗೆದಿಟ್ಟಿತ್ತು.

ಇನ್ನು ತೆರಿಗೆ ದರಗಳು ಹಾಗೂ ಸರ್‌ಚಾರ್ಜ್‌ಗಳಲ್ಲಿ ಒಂದಷ್ಟು ಸಡಿಲಿಕೆಯನ್ನು ತೆರಿಗೆ ಪಾವತಿದಾರ ಮಧ್ಯಮವರ್ಗ ನಿರೀಕ್ಷೆ ಮಾಡುತ್ತಿದೆ.

ಇದೇ ವೇಳೆ, ವಿಮಾ ಕ್ಷೇತ್ರದ ಮೇಲೆ ಸರ್ಕಾರ ಇನ್ನಷ್ಟು ಹೆಚ್ಚಿನ ಗಮನ ನೀಡಲಿದೆ ಎಂದು ಅಂದಾಜಿಸಲಾಗಿದೆ. ಹೆಚ್ಚಿನ ವೆಚ್ಚದೊಂದಿಗೆ ಪಿಎಲ್‌ಐನಂಥ ಯೋಜನೆಗಳ ಮೂಲಕ ಗ್ರಾಮೀಣ ಆರ್ಥಿಕತೆಗೆ ಹೆಚ್ಚಿನ ಒತ್ತು ನೀಡಲು 2022ರ ಬಜೆಟ್ ಮುಂದಾಗಲಿದೆ ಎಂದೂ ಸಹ ಹೇಳಲಾಗುತ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...