ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು 2022-23 ನೇ ಸಾಲಿನ ಬಜೆಟ್ ಮಂಡಿಸುತ್ತಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ಮಂಡಿಸುತ್ತಿರುವ ನಾಲ್ಕನೇ ಬಜೆಟ್ ಇದಾಗಿದ್ದು, ಪಂಚರಾಜ್ಯಗಳ ಚುನಾವಣೆ ನಡುವೆ ಮಂಡನೆಯಾಗುತ್ತಿರುವ ಈ ಬಜೆಟ್ ಸಹಜವಾಗಿಯೇ ಎಲ್ಲ ವರ್ಗದ ಜನತೆಯ ಕುತೂಹಲಕ್ಕೆ ಕಾರಣವಾಗಿದೆ.
ಮಹಾಮಾರಿ ಕೊರೊನಾ ಕಳೆದ ಮೂರು ವರ್ಷಗಳಿಂದ ಜನಸಾಮಾನ್ಯರನ್ನು ಆರ್ಥಿಕವಾಗಿ ಹೈರಾಣು ಮಾಡಿದ್ದು, ಇದರ ಮಧ್ಯೆ ಮಂಡನೆಯಾಗುತ್ತಿರುವ ಈ ಬಜೆಟ್ ನಲ್ಲಿ ಜನಸಾಮಾನ್ಯರಿಗೆ ಬಿಗ್ ರಿಲೀಫ್ ಸಿಗಬಹುದು ಎಂದು ಭಾವಿಸಲಾಗಿದೆ. ನಿರ್ಮಲಾ ಸೀತಾರಾಮನ್ ಅವರು ಮಂಡಿಸುತ್ತಿರುವ ಬಜೆಟ್ ನ ಮುಖ್ಯಾಂಶಗಳು ಈ ಕೆಳಕಂಡಂತಿದೆ.
ಬಜೆಟ್ ಮಂಡನೆ ಆರಂಭವಾಗಿದ್ದು, ಕೊರೊನಾದಿಂದಾಗಿ ಆರೋಗ್ಯ ಹಾಗೂ ಆರ್ಥಿಕವಾಗಿ ತೊಂದರೆಯಾಗಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಸ್ವಾತಂತ್ರೋತ್ಸವದ ಅಮೃತ ಮಹೋತ್ಸವವನ್ನು ನಾವು ಆಚರಿಸುತ್ತಿದ್ದು, ಬಹಳ ಮಹತ್ವ ಪಡೆದಿದೆ.
2014 ರಿಂದ ಜನ ಕಲ್ಯಾಣವನ್ನೇ ನಮ್ಮ ಸರ್ಕಾರ ಗುರಿಯಾಗಿಸಿಕೊಂಡಿದೆ.
2022 ರಲ್ಲಿ ದೇಶದ ಆರ್ಥಿಕತೆ ಬೆಳವಣಿಗೆ ಶೇ.9.2 ರಷ್ಟು ಆಗಿದೆ.
ಮುಂದಿನ 25 ವರ್ಷಗಳಿಗೆ ಸರ್ಕಾರದ ಬ್ಲೂ ಪ್ರಿಂಟ್ ರೆಡಿ ಇದೆ.
60 ಲಕ್ಷ ಉದ್ಯೋಗ ಸೃಷ್ಟಿಸುವ ಭರವಸೆಯನ್ನು ನಿರ್ಮಲಾ ಸೀತಾರಾಮನ್ ನೀಡಿದ್ದಾರೆ.
ಸದ್ಯದಲ್ಲೇ ಎಲ್ಐಸಿಯಿಂದ ಐ ಪಿ ಓ ಬಿಡುಗಡೆ.
ಈ ಬಾರಿ ಬಜೆಟ್ ನಲ್ಲಿ ಆತ್ಮ ನಿರ್ಭರತೆಗೆ ಹೆಚ್ಚಿನ ಒತ್ತು.
400 ವಂದೇ ಭಾರತ್ ಹೊಸ ರೈಲು.
ಸಾರಿಗೆ ಮೂಲಭೂತ ಸೌಕರ್ಯಕ್ಕೆ 20 ಸಾವಿರ ಕೋಟಿ ರೂಪಾಯಿ.
2023 ಅಂತರಾಷ್ಟ್ರೀಯ ಸಿರಿ ಧಾನ್ಯ ವರ್ಷವೆಂದು ಘೋಷಣೆ.
ಕಾವೇರಿ, ಪೆನ್ನಾರ್ ನದಿ ಜೋಡಣೆಗೆ ಸಮ್ಮತಿ.
ಗೋದಾವರಿ – ಕೃಷ್ಣಾ ನದಿ ಜೋಡಣೆ.
ಹೊಸ ವಿಧಾನದಲ್ಲಿ ಮೆಟ್ರೋ ರೈಲಿಗೆ ಹಣ ಹೂಡಿಕೆ.
ರಾಸಾಯನಿಕ ಮುಕ್ತ ನೈಸರ್ಗಿಕ ಕೃಷಿಗೆ ಪ್ರೋತ್ಸಾಹ.