alex Certify ʼವಿಶ್ವ ಶಾಂತಿʼಗೆ ಕರೆ ನೀಡಿರುವ ಪ್ರಧಾನಿ ಮೋದಿಯವರನ್ನು ಶ್ಲಾಘಿಸಿದ ಬೌದ್ಧ ಸನ್ಯಾಸಿಗಳು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼವಿಶ್ವ ಶಾಂತಿʼಗೆ ಕರೆ ನೀಡಿರುವ ಪ್ರಧಾನಿ ಮೋದಿಯವರನ್ನು ಶ್ಲಾಘಿಸಿದ ಬೌದ್ಧ ಸನ್ಯಾಸಿಗಳು

ಪ್ರಧಾನಿ ನರೇಂದ್ರ ಮೋದಿ ವಿಶ್ವದಲ್ಲಿ ಶಾಂತಿಗಾಗಿ ಕರೆ ನೀಡಿರುವುದನ್ನು ಬೌದ್ಧ ಸನ್ಯಾಸಿಗಳು ಶ್ಲಾಘಿಸಿದ್ದಾರೆ. ಲಡಾಖ್‌ನಲ್ಲಿ ನಡೆದ ‘ಶಾಂತಿ ನಡಿಗೆ’ಯಲ್ಲಿ ಭಾಗವಹಿಸಿದ್ದ ಬೌದ್ಧ ಸನ್ಯಾಸಿಗಳು ಪ್ರಧಾನಿ ಮೋದಿಯವರ ಕರೆಯನ್ನ ಶ್ಲಾಘಿಸಿದ್ದು, ಭಾರತದಲ್ಲಿ ಬೌದ್ಧ ಸ್ಥಳಗಳ ಅಭಿವೃದ್ಧಿಗೆ ಧನ್ಯವಾದಗಳನ್ನು ಅರ್ಪಿಸಿದರು.

ಥಾಯ್ಲೆಂಡ್ ನ ಬೌದ್ಧ ಸನ್ಯಾಸಿಗಳು ವಿಶ್ವಶಾಂತಿಗಾಗಿ ಆಯೋಜಿಸಿರುವ ಶಾಂತಿ ನಡಿಗೆಯು ಭಾನುವಾರ ಲಡಾಖ್ ನಲ್ಲಿ ಆರಂಭವಾಗಿದ್ದು 32 ದಿನಗಳ ಕಾಲ ನಡೆಯಲಿದೆ. ಭಗವಾನ್ ಬುದ್ಧನ ಶಾಂತಿ ಮತ್ತು ಸೌಹಾರ್ದತೆಯ ಸಂದೇಶಗಳನ್ನು ಸಾರುತ್ತಾ ಅವರು NDS ಕ್ರೀಡಾಂಗಣದಿಂದ ಸಮುದ್ರ ಮಟ್ಟದಿಂದ 11,841 ಅಡಿ ಎತ್ತರದಲ್ಲಿರುವ ಲಡಾಖ್‌ನ ಲೇಹ್‌ನಲ್ಲಿರುವ ಶಾಂತಿ ಸ್ತೂಪಕ್ಕೆ ನಡೆದರು.

ಲಡಾಖ್‌ನ ಲೇಹ್‌ನ ಮಹಾಬೋಧಿ ಅಂತರಾಷ್ಟ್ರೀಯ ಧ್ಯಾನ ಕೇಂದ್ರದ (ಎಂಐಎಂಸಿ) ಸಂಸ್ಥಾಪಕ ಮತ್ತು ಅಧ್ಯಕ್ಷ ಬಿಕ್ಕು ಸಂಘಸೇನಾ ಮಾತನಾಡಿ, “ಇಡೀ ಜಗತ್ತು ಅನೇಕ ಸವಾಲುಗಳನ್ನು ಎದುರಿಸುತ್ತಿದೆ. ಅದಕ್ಕೆ ಒಬ್ಬ ಮಹಾನ್ ನಾಯಕ ಬೇಕು. ಇಡೀ ಜಗತ್ತಿಗೆ ಶಾಂತಿ ಸೌಹಾರ್ದತೆ ಮತ್ತು ಸೌಹಾರ್ದವನ್ನು ತರಬಲ್ಲ ಅಂತಹ ನಾಯಕರೇ ನಮ್ಮ ಪ್ರಧಾನಿ ನರೇಂದ್ರ ಮೋದಿʼ ಎಂದರು.

ಯೋಗ, ಧ್ಯಾನ ಮತ್ತು ವಸುಧೈವ ಕುಟುಂಬಕಂನಂತಹ ಆಧ್ಯಾತ್ಮಿಕ ಮೌಲ್ಯಗಳನ್ನು ಸಂಯೋಜಿಸುವ ಇಂತಹ ಮಹಾನ್ ನಾಯಕನನ್ನು ಪಡೆದ ಭಾರತವು ಅದೃಷ್ಟ ಮಾಡಿದೆ ಎಂದು ಅವರು ಹೇಳಿದರು.

ಬೌದ್ಧ ಸನ್ಯಾಸಿಗಳು, ಇತರ ಧರ್ಮಗಳ ಮುಖಂಡರು, ಧಾರ್ಮಿಕ ಸಂಸ್ಥೆಗಳು, ಸಮುದಾಯದ ಮುಖಂಡರು, ಭಕ್ತರು ಮತ್ತು ವಿದ್ಯಾರ್ಥಿಗಳನ್ನು ಒಳಗೊಂಡ ಸಭೆಯಲ್ಲಿ ಸುಮಾರು 2500 ಮಂದಿ ಭಾಗವಹಿಸಿದ್ದರು. ಇದರಲ್ಲಿ ಥೈಲ್ಯಾಂಡ್, ನೇಪಾಳ, ವಿಯೆಟ್ನಾಂ, ಶ್ರೀಲಂಕಾ, ಭೂತಾನ್ ಮತ್ತು ಅಮೆರಿಕದಂತಹ ದೇಶಗಳ ಸನ್ಯಾಸಿಗಳು ಸೇರಿದ್ದಾರೆ. ಶಾಂತಿ ಮತ್ತು ಸಾಮರಸ್ಯದ ಸಂದೇಶವನ್ನು ಪ್ರಚಾರ ಮಾಡುವ ಗುರಿಯನ್ನು ಶಾಂತಿ ನಡಿಗೆ ಹೊಂದಿದೆ. ಇಂಡಿಯನ್ ಮೈನಾರಿಟೀಸ್ ಫೌಂಡೇಶನ್ (IMF) ಸಹ ಇದರಲ್ಲಿ ಭಾಗವಹಿಸಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...