ಈ ಹಿಂದೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ಅಪಮಾನಕರ ಹೇಳಿಕೆ ನೀಡಿ ತನ್ನ ಸಚಿವ ಸ್ಥಾನ ಕಳೆದುಕೊಂಡಿದ್ದ ಮಾಲ್ಡೀವ್ಸ್ ನ ಮರಿಯಂ, ಈಗ ಭಾರತದ ರಾಷ್ಟ್ರಧ್ವಜಕ್ಕೆ ಅಣಕವಾಡಿದ್ದಾರೆ. ಇದಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೇ ಮರಿಯಂ ಕ್ಷಮೆ ಯಾಚಿಸಿದ್ದಾರೆ.
ಇತ್ತೀಚೆಗೆ ಅಲ್ಲಿನ ವಿರೋಧ ಪಕ್ಷ ಮಾಲ್ಡೀವ್ಸ್ ಡೆಮಾಕ್ರೆಟಿಕ್ ಪಾರ್ಟಿ (ಎಂ ಡಿ ಪಿ) ಅಭಿಯಾನ ಒಂದನ್ನು ನಡೆಸಿದ್ದು, ಅದರ ತಿರುಚಲಾದ ಭಿತ್ತಿ ಪತ್ರ ಹಾಗೂ ಭಾರತದ ರಾಷ್ಟ್ರ ಧ್ವಜದ ಕೆಲ ಭಾಗವನ್ನು ಒಟ್ಟಾಗಿಸಿ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದ ಮರಿಯಂ, ಅಣಕವಾಡಿದ್ದರು.
ಇದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಕ್ಷಮೆ ಯಾಚಿಸಿರುವ ಮರಿಯಂ, ವಿರೋಧಪಕ್ಷದ ಪೋಸ್ಟ್ ಗೆ ಪ್ರತಿಕ್ರಿಯಿಸಿ ನಾನು ಹಾಕಿದ್ದ ಚಿತ್ರದಲ್ಲಿನ ಕೆಲ ಅಂಶಗಳು ಭಾರತದ ರಾಷ್ಟ್ರ ಧ್ವಜದ ಜೊತೆಗೆ ಹೋಲಿಕೆಯಾಗುತ್ತಿದೆ ಎಂಬುದು ನನಗೆ ಅರಿವಿರಲಿಲ್ಲ. ಉದ್ದೇಶಪೂರ್ವಕವಾಗಿ ನಾನು ಇದನ್ನು ಮಾಡಿಲ್ಲ, ಇದರಿಂದ ಆಗಿರುವ ಗೊಂದಲ ಮತ್ತು ನೋವುಗಳಿಗೆ ನಾನು ಕ್ಷಮೆ ಕೋರುತ್ತೇನೆ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.