ಮಂಗಳೂರು: ಮಂಗಳೂರು ನಗರದ ಕಾವೂರಿನಲ್ಲಿ ನೀರಿನ ಬಕೆಟ್ ಗೆ ಬಿದ್ದು ಮಗು ಮೃತಪಟ್ಟ ದಾರುಣ ಘಟನೆ ನಡೆದಿದೆ.
ಒಂದು ವರ್ಷ ಎಂಟು ತಿಂಗಳ ಆಯಿಷಾ ಮೃತಪಟ್ಟ ಮಗು ಎಂದು ಹೇಳಲಾಗಿದೆ. ಜಾರ್ಖಂಡ್ ಮೂಲದವರಾದ ಫಿರೋಜ್ ಅನ್ಸಾರಿ ದಂಪತಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಕಾವೂರು ಮಸೀದಿ ಬಳಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಫಿರೋಜ್ ಅನ್ಸಾರಿ ಅವರ ಪುತ್ರಿಯಾಗಿರುವ ಆಯಿಷಾ ಬುಧವಾರ ಸಂಜೆ ಮನೆಯಲ್ಲಿ ಆಟವಾಡುವಾಗ ಆಕಸ್ಮಿಕವಾಗಿ ನೀರು ತುಂಬಿದ ಬಕೆಟ್ ಗೆ ಬಿದ್ದು ಮೃತಪಟ್ಟಿದ್ದಾಳೆ ಎನ್ನಲಾಗಿದೆ.