ಬಿಟಿಎಸ್ ಅನ್ನೋ ದಕ್ಷಿಣ ಕೊರಿಯಾದ ಮ್ಯೂಸಿಕ್ ಬ್ಯಾಂಡ್ ಯಾರಿಗೆ ಗೊತ್ತಿಲ್ಲಾ ಹೇಳಿ. ಇಡೀ ವಿಶ್ವದಲ್ಲಿ ತುಂಬಾ ಜನಪ್ರಿಯವಾಗಿರೊ ಈ ಬ್ಯಾಂಡ್ ನ ಸದಸ್ಯರು ಅಕ್ಷರಶಃ ಯುವಜನತೆಯ ಮನಸ್ಸನ್ನ ಆಳುತ್ತಿದ್ದಾರೆ. ಇವ್ರ ಜನಪ್ರಿಯತೆಗೆ ಮತ್ತೊಂದು ಉದಾಹರಣೆ ಅಂದ್ರೆ ಬ್ರ್ಯಾಂಡ್ ಒಂದು ಇವರ ಸಲುವಾಗಿ ತನ್ನ ಹೆಸರನ್ನೆ ಬದಲಾಯಿಸಿದೆ. ಬಿಟಿಎಸ್ ಸದಸ್ಯ ಜಂಗ್ ಕುಕ್ ಅಮೆರಿಕಾದ ಫಾಸ್ಟ್ ಫುಡ್ ಕಂಪನಿ ಚಿಪೋಟ್ಲೆಯನ್ನ, ಚಿಕೋಟ್ಲೆ ಎಂದು ತಪ್ಪಾಗಿ ಉಚ್ಛರಿಸಿದ್ದಾರೆ. ಈಗ ಚಿಪೋಟ್ಲೆ ತನ್ನ ಟ್ವಿಟ್ಟರ್ ಯೂಸರ್ ನೇಮ್ ಅನ್ನು ಚಿಕೋಟ್ಲೆ ಎಂದು ಬದಲಾಯಿಸಿಕೊಂಡಿದೆ.
ಬಿಟಿಎಸ್ ನ ಅಧಿಕೃತ ಯೂಟ್ಯೂಬ್ ಚಾನಲ್ BANGTANTV ಇತ್ತೀಚೆಗೆ ಬಿಡುಗಡೆ ಮಾಡಿದ ವೀಡಿಯೊದಲ್ಲಿ ಈ ತಪ್ಪು ಉಚ್ಛರಣೆಯ ತುಣುಕನ್ನ ನೋಡಬಹುದು. ದಿ ಲೇಟ್ ಲೇಟ್ ಶೋ ವಿತ್ ಜೇಮ್ಸ್ ಕಾರ್ಡೆನ್ ಸೆಟ್ನಲ್ಲಿದ್ದ ಸದಸ್ಯರು, ಕ್ರಾಸ್ವಾಕ್ ಸಂಗೀತ ಕಚೇರಿಯ ಚಿತ್ರೀಕರಣ ಮುಗಿಸಿದ ನಂತರ ಊಟ ಮಾಡಲು ತಯಾರಾದರು.
ಈ 2-ನಿಮಿಷದ ಕ್ಲಿಪ್ನಲ್ಲಿ, ಜಂಗ್ ಕುಕ್ ಚಿಪೋಟ್ಲೆ ಬೌಲ್ ಅನ್ನು ತೆರೆದು ಪರಿಶೀಲಿಸಿ ಏನಿದು ಚಿಕೋಟ್ಲೆ ಎಂದಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ವೀಡಿಯೊ ವೈರಲ್ ಆದ ನಂತರ, ಚಿಪೋಟ್ಲೆ ತಮ್ಮ ಹೆಸರನ್ನು ಟ್ವಿಟರ್ನಲ್ಲಿ ಚಿಕೋಟ್ಲೆ ಎಂದು ಬದಲಾಯಿಸಿಕೊಂಡಿದೆ. ಚಿಕೋಟ್ಲೆ ಎಂದು ಹೆಸರು ಬದಲಾಯಿಸಿಕೊಂಡ ಮೇಲೆ ಶುಭೋದಯ ಟ್ಯಾನೀಸ್ ಎಂದು ಮೊದಲ ಪೋಸ್ಟ್ ಹಂಚಿಕೊಂಡಿದೆ. ಬಿಟಿಎಸ್ ನ ಎಲ್ಲಾ ಸದಸ್ಯರನ್ನು ಒಟ್ಟಾಗಿ, ಅವರ ಅಭಿಮಾನಿಗಳು “ಟ್ಯಾನೀಸ್” ಎಂದು ಉಲ್ಲೇಖಿಸುತ್ತಾರೆ.