ಚಾಮರಾಜನಗರ: ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಮನನೊಂದ ಯಡಿಯೂರಪ್ಪ ಅಭಿಮಾನಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದಲ್ಲಿ ನಡೆದಿದೆ.
ರವಿ (35) ಆತ್ಮಹತ್ಯೆಗೆ ಶರಣಾದ ಬಿ ಎಸ್ ವೈ ಅಪ್ಪಟ ಅಭಿಮಾನಿ. ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ರವಿ ಯಡಿಯೂರಪ್ಪನವರ ಅಪ್ಪಟ ಅಭಿಮಾನಿಯಾಗಿದ್ದು, ನಿನ್ನೆ ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡುತ್ತಿದ್ದಂತೆ ತೀವ್ರವಾಗಿ ಮನನೊಂದಿದ್ದ ಎನ್ನಲಾಗಿದೆ. ಇದೇ ನೊವಿನಿಂದ ನೇಣಿಗೆ ಕೊರಳೊಡ್ಡಿದ್ದಾನೆ.
ಅಭಿಮಾನಿ ಆತ್ಮಹತ್ಯೆಗೆ ಬೇಸರ ವ್ಯಕ್ತಪಡಿಸಿರುವ ಬಿ ಎಸ್ ವೈ, ಅಭಿಮಾನ ಅತಿರೇಕಕ್ಕೆ ಹೋಗಬಾರದು. ರವಿ ಎಂಬುವವರು ಆತ್ಮಹತ್ಯೆಗೆ ಶರಣಾದ ಸುದ್ದಿ ಅತೀವ ನೋವು ತಂದಿದೆ. ರಾಜಕಾರಣದಲ್ಲಿ ಏರಿಳಿತ ಸಹಜ. ಇದಕ್ಕಾಗಿ ಪ್ರಣಾರ್ಪಣೆ ಮಾಡಿಕೊಳ್ಳುವ ನಿರ್ಧಾರ ಒಪ್ಪಲಾಗದು. ಇದರಿಂದ ನಿಮ್ಮ ಕುಟುಂಬಕ್ಕಾಗುವ ನಷ್ಟವನ್ನು ಯಾರಿಂದಲೂ ಭರಿಸಲು ಸಾಧ್ಯವಿಲ್ಲ. ರವಿ ಕುಟುಂಬದ ನೋವಿನೊಂದಿಗೆ ನಾನಿರುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ