ನವದೆಹಲಿ: ಕರ್ನಾಟಕದಲ್ಲಿ ಧರ್ಮ ಅಸಹಿಷ್ಣುತೆ ಬಗ್ಗೆ ಲೋಕಸಭೆಯಲ್ಲಿ ಪ್ರಸ್ತಾಪಿಸಲಾಗಿದೆ. ಬಿ.ಎಸ್.ಪಿ. ಲೋಕಸಭೆ ಸದಸ್ಯ ಡ್ಯಾನಿಷ್ ಅಲಿ ಪ್ರಸ್ತಾಪಿಸಿ ಧರ್ಮ ಆಧಾರಿತ ವ್ಯಾಪಾರಕ್ಕೆ ಅವಕಾಶ ಬಹಳ ತಪ್ಪು ಎಂದು ಹೇಳಿದ್ದಾರೆ.
ಯಾರು ಅಂಗಡಿ ತೆರೆಯಬೇಕು ಯಾರು ತೆರೆಯಬಾರದು ಎಂದು ನಿರ್ಧರಿಸುವುದು ತಪ್ಪು. ಕಿರಣ್ ಮಜುಂದಾರ್ ಶಾ ಅವರು ಕೂಡ ಇದನ್ನು ಪರಿಹರಿಸಬೇಕೆಂದು ಹೇಳಿದ್ದಾರೆ. ಧರ್ಮ ಸಹಿಷ್ಣುತೆಯಿಂದ ಹೂಡಿಕೆ ಮೇಲೆ ಪರಿಣಾಮ ಬೀರುತ್ತದೆ. ಧರ್ಮ ಅಸಹಿಷ್ಣುತೆಯನ್ನು ತಕ್ಷಣವೇ ನಿಲ್ಲಿಸಬೇಕೆಂದು ಅಮ್ರೋಹ ಲೋಕಸಭೆ ಕ್ಷೇತ್ರದ ಸದಸ್ಯ ಡ್ಯಾನಿಷ್ ಅಲಿ ಪ್ರಸ್ತಾಪಿಸಿದ್ದಾರೆ.