ಉತ್ತರ ಪ್ರದೇಶದ ಗಾಜಿಪುರದ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಸಂಸದ ಅಫ್ಜಲ್ ಅನ್ಸಾರಿ ಅವರು 2007ರ ದರೋಡೆಕೋರರ ಆಕ್ಟ್ ಪ್ರಕರಣದಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದು ತಮ್ಮ ಲೋಕಸಭಾ ಸದಸ್ಯತ್ವವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ.
ರಾಹುಲ್ ಗಾಂಧಿ, ಮಾನನಷ್ಟ ಮೊಕದ್ದಮೆ ಪ್ರಕರಣದಲ್ಲಿ 2 ವರ್ಷ ಜೈಲು ಶಿಕ್ಷೆಗೊಳಗಾದ ಬಳಿಕ ಅವರು ಲೋಕಸಭಾ ಸದಸ್ಯ ಸ್ಥಾನವನ್ನು ಕಳೆದುಕೊಂಡರು. ಅದರಂತೆ ಇದೀಗ ನಾಲ್ಕು ವರ್ಷಗಳ ಜೈಲು ಶಿಕ್ಷೆಗೆ ಒಳಗಾಗಿರುವ ಅಫ್ಜಲ್ ಅನ್ಸಾರಿ ಸಂಸದ ಸ್ಥಾನಕ್ಕೆ ಕಂಟಕ ಬಂದಿದೆ.
ಗಾಜಿಪುರದ ಜನಪ್ರತಿನಿಧಿಗಳ ನ್ಯಾಯಾಲಯವು ಸಂಸದ ಅಫ್ಜಲ್ಗೆ 16 ವರ್ಷ ಹಳೆಯ ಪ್ರಕರಣದಲ್ಲಿ ಆತನ ಸಹೋದರ ಮತ್ತು ಯುಪಿ ಡಾನ್ ಮುಖ್ತಾರ್ ಅನ್ಸಾರಿಯೊಂದಿಗೆ ಶಿಕ್ಷೆ ವಿಧಿಸಿದೆ.
ಅಫ್ಜಲ್ ಸಹೋದರನಿಗೆ 10 ವರ್ಷ ಜೈಲು ಶಿಕ್ಷೆ, ಮುಖ್ತಾರ್ಗೆ 5 ಲಕ್ಷ ರೂ. ದಂಡದೊಂದಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅಫ್ಜಲ್ 4 ವರ್ಷಗಳ ಜೈಲು ಶಿಕ್ಷೆ ಜೊತೆಗೆ 1 ಲಕ್ಷ ರೂಪಾಯಿ ದಂಡವನ್ನೂ ವಿಧಿಸಿದೆ. ಈ ಶಿಕ್ಷೆಯ ನಂತರ ಬಿಎಸ್ಪಿ ಸಂಸದ ಅಫ್ಜಲ್ ಕಾನೂನಿನ ಪ್ರಕಾರ ಸಂಸತ್ತಿನಲ್ಲಿ ತಮ್ಮ ಸ್ಥಾನವನ್ನು ಕಳೆದುಕೊಳ್ಳಬಹುದು.
ಸಂಸತ್ತಿನ ನಿಯಮಗಳ ಪ್ರಕಾರ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಗೆ ಒಳಗಾದ ಯಾವುದೇ ಸದಸ್ಯರು ಸ್ವಯಂಚಾಲಿತವಾಗಿ ಅನರ್ಹರಾಗುತ್ತಾರೆ.
ಶಾಸಕ ಕೃಷ್ಣಾನಂದ ರೈ ಹತ್ಯೆಯಾಗಿ ಎರಡು ವರ್ಷಗಳ ಬಳಿಕ 2007ರ ನವೆಂಬರ್ 22ರಂದು ಮೊಹಮ್ಮದಾಬಾದ್ ಪೊಲೀಸರು ಅನ್ಸಾರಿ ಸಹೋದರರ ವಿರುದ್ಧ ದರೋಡೆಕೋರ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದರು.
ಮುಕ್ತಾರ್ ಮತ್ತು ಅಫ್ಜಲ್ ಇಬ್ಬರೂ 2005 ರಲ್ಲಿ ಶಾಸಕ ರೈ ಅವರ ಹತ್ಯೆಯಲ್ಲಿ ಆರೋಪಿಗಳಾಗಿದ್ದರು