ಭಾರತ್ ಸಂಚಾರ್ ನಿಗಮ್ ಲಿಮಿಟೆಡ್(BSNL) ತನ್ನ ಹೊಚ್ಚಹೊಸ ಲೋಗೋ ಅನಾವರಣಗೊಳಿಸಿದೆ. ಟೆಲ್ಕೊ ಪ್ರಕಾರ ಇದು ನಂಬಿಕೆ, ಶಕ್ತಿ ಮತ್ತು ರಾಷ್ಟ್ರವ್ಯಾಪಿ ವ್ಯಾಪ್ತಿಯನ್ನು ಸಂಕೇತಿಸುತ್ತದೆ.
ದೇಶಾದ್ಯಂತ 4G ನೆಟ್ವರ್ಕ್ ಬಿಡುಗಡೆಗೆ ಮುಂಚಿತವಾಗಿ, BSNL 7 ಹೊಸ ಸೇವೆಗಳನ್ನು ಪರಿಚಯಿಸಿದೆ, ಇದರಲ್ಲಿ ಸ್ಪ್ಯಾಮ್-ಬ್ಲಾಕಿಂಗ್ ಪರಿಹಾರ, ವೈ-ಫೈ ರೋಮಿಂಗ್ ಸೇವೆ, ಇಂಟ್ರಾನೆಟ್ ಟಿವಿ ಕೂಡ ಸೇರಿವೆ.
ಈ ಕ್ರಮದಿಂದ ತಡೆರಹಿತ, ಸಾರ್ವತ್ರಿಕ, ಕೈಗೆಟುಕುವ ಮತ್ತು ಎಲ್ಲರಿಗೂ ಪ್ರವೇಶಿಸಬಹುದಾದ ಸಂಪರ್ಕವನ್ನು ಒದಗಿಸುವ ತನ್ನ ಬದ್ಧತೆಯನ್ನು BSNL ಪುನರುಚ್ಚರಿಸುತ್ತದೆ ಎಂದು ಕೇಂದ್ರ ಸಂವಹನ ಮತ್ತು ಅಭಿವೃದ್ಧಿ ಸಚಿವ ಜ್ಯೋತಿರಾದಿತ್ಯ ಎಂ. ಸಿಂಧಿಯಾ ಹೇಳಿದ್ದಾರೆ.
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್(BSNL) ಹೊಸ ಸೇವೆಗಳು:
BSNL ಇದು ಸ್ಪ್ಯಾಮ್-ಮುಕ್ತ ನೆಟ್ವರ್ಕ್ ಎಂದು ಹೇಳಿಕೊಂಡಿದೆ. ಸ್ಪ್ಯಾಮ್ ತೊಡೆದುಹಾಕಲು ಕಸ್ಟಮ್ ಪರಿಹಾರ ಬಳಸುತ್ತಿದೆ. ಇದಲ್ಲದೇ, ಟೆಲ್ಕೋ Wi-Fi ರೋಮಿಂಗ್ ಅನ್ನು ಸಹ ಘೋಷಿಸಿದೆ. ಇದು BSNL ನೆಟ್ವರ್ಕ್ ಬಳಕೆದಾರರಿಗೆ ಪ್ರಯಾಣ ಮಾಡುವಾಗ ಯಾವುದೇ BSNL FTTH Wi-Fi ನೆಟ್ವರ್ಕ್ಗೆ ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ. FTTH ಬಳಕೆದಾರರು ಕಂಪನಿಯ ಫೈಬರ್ ಆಧಾರಿತ ಇಂಟ್ರಾನೆಟ್ ಲೈವ್ ಟಿವಿ ಮೂಲಕ 500 ಪ್ರೀಮಿಯಂ ಟಿವಿ ಚಾನೆಲ್ಗಳನ್ನು ಪ್ರವೇಶಿಸಬಹುದು.
ಹೊಸ BSNL ಸಿಮ್ ಕಾರ್ಡ್ಗಳನ್ನು ಎನಿ ಟೈಮ್ ಸಿಮ್(ATS) ಕಿಯೋಸ್ಕ್ ಗಳೊಂದಿಗೆ ಖರೀದಿಸುವ ಪ್ರಕ್ರಿಯೆ ತುಂಬಾ ಸುಲಭಗೊಳಿಸಲಾಗಿದೆ. ಈ ಮೂಲಕ KYC ಪೂರ್ಣಗೊಳಿಸಿ SIM ಕಾರ್ಡ್ ಸಕ್ರಿಯಗೊಳಿಸಬಹುದಾಗಿದೆ. ಟೆಲ್ಕೊವು ಎಸ್ಎಂಎಸ್ ಸೇವೆಗಳಿಗಾಗಿ ಭಾರತದ ಮೊದಲ ಉಪಗ್ರಹದಿಂದ ಸಾಧನದ ಸಂಪರ್ಕದಂತಹ ಹೆಚ್ಚುವರಿ ಸೇವೆಗಳನ್ನು ಸಹ ನೀಡುತ್ತಿದೆ, ಇದು ಭೂಮಿ, ಗಾಳಿ ಮತ್ತು ಸಮುದ್ರದಲ್ಲಿ ಕಾರ್ಯನಿರ್ವಹಿಸುತ್ತದೆ.
ಅಂತೆಯೇ, ವಿಪತ್ತು ನಿರ್ವಹಣೆಗಾಗಿ ಒಂದೇ ಒಂದು ಬಾರಿ ಪರಿಹಾರ ನೆಟ್ವರ್ಕ್ ಸೇವೆಯನ್ನು ಘೋಷಿಸಿದೆ. BSNL ಗಣಿಗಾರಿಕೆ ವಲಯಕ್ಕೆ ಸುರಕ್ಷಿತ 5G ನೆಟ್ವರ್ಕ್ ಅನ್ನು ಘೋಷಿಸಿದೆ.
BSNL ತನ್ನ 4G ನೆಟ್ವರ್ಕ್ ಅನ್ನು ದೇಶಾದ್ಯಂತ ವೇಗವಾಗಿ ವಿಸ್ತರಿಸುತ್ತಿದೆ. ಏರ್ಟೆಲ್, ಜಿಯೋ ಮತ್ತು Vi ನಿಂದ ಸುಂಕ ಹೆಚ್ಚಳದ ನಂತರ BSNL ಗ್ರಾಹಕರ ಸಂಖ್ಯೆ ಹೆಚ್ಚಿದೆ. ಕೈಗೆಟುಕುವ BSNL ರೀಚಾರ್ಜ್ ಯೋಜನೆಗಳಿಂದ ಚಂದಾದಾರರ ಸಂಖ್ಯೆಯಲ್ಲಿ ಹೆಚ್ಚಳ ಆಗಿದೆ. ಸರ್ಕಾರಿ ಸ್ವಾಮ್ಯದ ಟೆಲ್ಕೊ 2025 ರ ವೇಳೆಗೆ ದೇಶಾದ್ಯಂತ 4G ರೋಲ್ಔಟ್ ಅನ್ನು ಪೂರ್ಣಗೊಳಿಸುವ ಗುರಿಯನ್ನು ಹೊಂದಿದೆ. ಇದರ ಜೊತೆಗೇ 5 ಜಿ ನೆಟ್ ವರ್ಕ್ ಪ್ರಕ್ರಿಯೆ ಕೂಡ ನಡೆದಿದೆ.