ಟೆಲಿಕಾಂ ಕಂಪನಿಗಳ ಮಧ್ಯೆ ಬೆಲೆ ಯುದ್ಧ ಮುಂದುವರೆದಿದೆ. ಎಲ್ಲಾ ಟೆಲಿಕಾಂ ಕಂಪನಿಗಳು ಅಗ್ಗದ ಯೋಜನೆಯನ್ನು ನೀಡುವ ಮೂಲಕ ಗ್ರಾಹಕರನ್ನು ಸೆಳೆಯುತ್ತಿವೆ. ಖಾಸಗಿ ಕಂಪನಿಗಳು ಮಾತ್ರವಲ್ಲ ಸರ್ಕಾರಿ ಕಂಪನಿ ಬಿಎಸ್ಎನ್ಎಲ್ ಕೂಡ ಅಗ್ಗದ ಯೋಜನೆಯನ್ನು ಗ್ರಾಹಕರಿಗೆ ನೀಡ್ತಿದೆ.
ಬಿಎಸ್ಎನ್ಎಲ್ 107 ರೂಪಾಯಿ ಅಗ್ಗದ ಯೋಜನೆಯಾಗಿದೆ. ಇದು 90 ದಿನಗಳ ಸಿಂಧುತ್ವ ಹೊಂದಿದೆ. ಮೊದಲ 30 ದಿನಗಳವರೆಗೆ ಗ್ರಾಹಕರಿಗೆ 10ಜಿಬಿ ಡೇಟಾ ಸಿಗಲಿದೆ. 24 ದಿನಗಳವರೆಗೆ ಅನಿಯಮಿತ ಧ್ವನಿ ಕರೆ ಮತ್ತು 100 ಉಚಿತ ಎಸ್ಎಂಎಸ್ ಸಿಗಲಿದೆ.
ಆದ್ರೆ ಜಿಯೋದ 98 ರೂಪಾಯಿ ಪ್ಲಾನ್ 14 ದಿನಗಳ ವ್ಯಾಲಿಡಿಟಿಯೊಂದಿಗೆ ಬರುತ್ತದೆ. ಇದ್ರಲ್ಲಿ ಪ್ರತಿದಿನ 1.5ಜಿಬಿ ಡೇಟಾ, ಅನಿಯಮಿತ ಧ್ವನಿ ಕರೆ ಮತ್ತು ಎಲ್ಲಾ ಜಿಯೋ ಅಪ್ಲಿಕೇಶನ್‌ಗಳಿಗೆ ಚಂದಾದಾರಿಕೆ ಸಿಗುತ್ತದೆ. ರಿಲಯನ್ಸ್ ಜಿಯೋದ 149 ರೂಪಾಯಿ ಯೋಜನೆಯಲ್ಲಿ 1ಜಿಬಿ ಡೇಟಾ ಲಭ್ಯವಿದೆ. ಅನಿಯಮಿತ ಧ್ವನಿ ಕರೆ ಮತ್ತು ದಿನಕ್ಕೆ 100 ಎಸ್ಎಂಎಸ್ ಗ್ರಾಹಕರಿಗೆ ಸಿಗುತ್ತದೆ.
ಇನ್ನು ಏರ್ಟೆಲ್ ನ 129 ರೂಪಾಯಿ ಯೋಜನೆಯಲ್ಲಿ 300 ಎಸ್ಎಂಎಸ್ ಉಚಿತವಾಗಿ ಸಿಗುತ್ತದೆ. ಅನಿಯಮಿತ ಧ್ವನಿ ಕರೆ ಮತ್ತು 1ಜಿಬಿ ಡೇಟಾ 24 ದಿನಗಳವರೆಗೆ ಲಭ್ಯವಿದೆ. ಹಲೋ ಟ್ಯೂನ್ಸ್ ಮತ್ತು ವಿಂಕ್ ಮ್ಯೂಸಿಕ್‌ಗೆ ಉಚಿತ ಚಂದಾದಾರಿಕೆ ಕೂಡ ಸಿಗಲಿದೆ.
ವೊಡಾಫೋನ್ ಐಡಿಯಾದ 129 ರೂಪಾಯಿ ಯೋಜನೆಯಲ್ಲಿ ಒಟ್ಟು 200ಎಂಬಿ ಡೇಟಾ ಮತ್ತು ಅನಿಯಮಿತ ಧ್ವನಿ ಕರೆ ಸಿಗಲಿದೆ. ಈ ಯೋಜನೆ ಮಾನ್ಯತೆ 18 ದಿನವಾಗಿದೆ.
ಈ ಎಲ್ಲ ಯೋಜನೆಗಳಿಗೆ ಹೋಲಿಸಿದ್ರೆ ಬಿಎಸ್ಎನ್ಎಲ್ ಯೋಜನೆ ಅಗ್ಗದ ದರದಲ್ಲಿ ಹೆಚ್ಚು ಡೇಟಾ ನೀಡುವ ಯೋಜನೆಯಾಗಿದೆ.