ಟೆಲಿಕಾಂ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಅಗ್ಗದ ಯೋಜನೆಗಳನ್ನು ಜಾರಿಗೆ ತರ್ತಿವೆ. ಅದ್ರಲ್ಲಿ ಜಿಯೋ, ಏರ್ಟೆಲ್ ಸೇರಿದಂತೆ ಖಾಸಗಿ ಕಂಪನಿಗಳು ಮುಂದಿವೆ.
ಆದ್ರೆ ಸಾರ್ವಜನಿಕ ವಲಯದ ಕಂಪನಿ ಬಿಎಸ್ಎನ್ಎಲ್ ಕೂಡ ಇದ್ರಿಂದ ಹಿಂದೆ ಬಿದ್ದಿಲ್ಲ. ಬಿಎಸ್ಎನ್ಎಲ್ ಗ್ರಾಹಕರಿಗೆ ಅಗ್ಗದ ದರದಲ್ಲಿ ಪ್ರಿಪೇಯ್ಡ್ ಹಾಗೂ ಪೋಸ್ಟ್ ಪೇಯ್ಡ್ ಯೋಜನೆ ನೀಡ್ತಿದೆ.
ಬಿಎಸ್ಎನ್ಎಲ್ 40 ರೂಪಾಯಿಗಿಂತ ಕಡಿಮೆ ಬೆಲೆಗೆ ಗ್ರಾಹಕರಿಗೆ ಯೋಜನೆ ನೀಡ್ತಿದೆ. ಕಂಪನಿ ಕೇವಲ 36 ರೂಪಾಯಿಗೆ ಅಗ್ಗದ ಪ್ಲಾನ್ ನೀಡ್ತಿದೆ. ಈ ಪ್ಲಾನ್ ನಲ್ಲಿ ಕಂಪನಿ ಗ್ರಾಹಕರಿಗೆ ಡೇಟಾ, ಟಾಕ್ ಟೈಮ್ ಮತ್ತು ಉಚಿತ ಕರೆ ಸೌಲಭ್ಯ ಸಿಗ್ತಿದೆ.
ಈ ಪ್ಲಾನ್ ನಲ್ಲಿ ಗ್ರಾಹಕರು ಯಾವುದೇ ನೆಟ್‌ವರ್ಕ್‌ನಲ್ಲಿ ಕರೆ ಮಾಡಬಹುದು. ಕಂಪನಿ, ಈ ಪ್ಲಾನ್ ನಲ್ಲಿ 200 ಎಂಬಿ ಡೇಟಾವನ್ನು ಸಹ ನೀಡಲಾಗುತ್ತಿದೆ. ಐದು ಪೈಸೆಗೆ ಒಂದು ಎಸ್‌ಎಂಎಸ್ ಕಳುಹಿಸಬಹುದಾಗಿದೆ. ಈ ಪ್ರಿಪೇಯ್ಡ್ ಯೋಜನೆಯ ಮಾನ್ಯತೆ 15 ದಿನಗಳು. ಬಿಎಸ್ಎನ್ಎಲ್ ಚಂದಾದಾರರಾಗಿದ್ದರೆ, ಕೈಗೆಟುಕುವ ದರದಲ್ಲಿ ಗ್ರಾಹಕರು ಅನೇಕ ಪ್ರಯೋಜನ ಪಡೆಯಲಿದ್ದಾರೆ.