ನವದೆಹಲಿ: ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸೇವಾ ಪೂರೈಕೆದಾರ ಭಾರತ್ ಸಂಚಾರ ನಿಗಮ ಲಿಮಿಟೆಡ್(BSNL) ಕಳೆದ ಹಣಕಾಸು ವರ್ಷದಲ್ಲಿ 1.9 ಕೋಟಿ ಗ್ರಾಹಕರನ್ನು ಕಳೆದುಕೊಂಡಿದೆ.
2024ರ ಮಾರ್ಚ್ ನಲ್ಲಿ ಬಿಎಸ್ಎನ್ಎಲ್ ನಿಂದ 20.30 ಲಕ್ಷ ಗ್ರಾಹಕರು ಹೊರ ಹೋಗಿದ್ದಾರೆ ಎಂದು ಟ್ರಾಯ್ ಮಾಹಿತಿ ನೀಡಿದೆ. ಕಳೆದ ವರ್ಷ 1.80 ಕೋಟಿ ಗ್ರಾಹಕರು ಬಿಎಸ್ಎನ್ಎಲ್ ನಿಂದ ದೂರವಾಗಿದ್ದಾರೆ. 4ಜಿ ಮತ್ತು 5ಜಿ ಸೇವೆಗಳನ್ನು ಇನ್ನೂ ಒದಗಿಸದ ಕಾರಣ ಗ್ರಾಹಕರು ಬೇರೆ ಮೊಬೈಲ್ ಕಂಪನಿಗಳ ಸೇರಿದ್ದಾರೆ. 2024ರ ಮಾರ್ಚ್ ನಲ್ಲಿ ಮಾರುಕಟ್ಟೆಯಲ್ಲಿ ಬಿಎಸ್ಎನ್ಎಲ್ ಪಾಲು ಶೇಕಡ 7.57 ಕ್ಕೆ ಇಳಿಕೆಯಾಗಿದೆ.
ನೆಟ್ವರ್ಕ್ ನವೀಕರಣದಲ್ಲಿ ಹೂಡಿಕೆಯ ಕೊರತೆಯಿಂದ ಬಿಎಸ್ಎನ್ಎಲ್ ಸ್ವರೂಪ ಬದಲಾಗಿಲ್ಲ. ಗ್ರಾಹಕರು ವಲಸೆ ಹೋಗುತ್ತಿದ್ದಾರೆ. ವೊಡಾಫೋನ್ ನಿಂದ ಮಾರ್ಚ್ ನಲ್ಲಿ 6.80 ಲಕ್ಷ ಗ್ರಾಹಕರು ಹೊರ ಹೋಗಿದ್ದಾರೆ. ಬಹುತೇಕರು ರಿಲಯನ್ಸ್ ಜಿಯೋ ಮತ್ತು ಏರ್ ಟೆಲ್ ಸೇವೆ ಪಡೆದಿದ್ದಾರೆ. ಜಿಯೋ ಗೆ ಮಾರ್ಚ್ ನಲ್ಲಿ 21 ಲಕ್ಷ ಹೊಸ ಬಳಕೆದಾರರು ಸೇರ್ಪಡೆಯಾಗಿದ್ದು, ಒಟ್ಟು ಗ್ರಾಹಕರ ಸಂಖ್ಯೆ 46 ಕೋಟಿ ದಾಟಿದೆ.