ಟೆಲಿಕಾಂ ಕಂಪನಿಯಲ್ಲಿ ಬೆಲೆ ಯುದ್ಧ ಮುಂದುವರೆದಿದೆ. ಜಿಯೋ ಟೆಲಿಕಾಂ ಮಾರುಕಟ್ಟೆಗೆ ಬರ್ತಿದ್ದಂತೆ ಬೆಲೆ ಯುದ್ಧ ಶುರುವಾಗಿತ್ತು. ಈಗ್ಲೂ ಟೆಲಿಕಾಂ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಸಾಕಷ್ಟು ಪ್ರಯತ್ನ ನಡೆಸುತ್ತಿವೆ. ಸಾರ್ವಜನಿಕ ಕಂಪನಿ ಬಿಎಸ್ಎನ್ಎಲ್ ಕೂಡ ಇದ್ರಲ್ಲಿ ಹಿಂದೆ ಬಿದ್ದಿಲ್ಲ.
ಬಿಎಸ್ಎನ್ಎಲ್ ಇತ್ತೀಚಿಗಷ್ಟೆ ಕೆಲ ಅಗ್ಗದ ಪ್ಲಾನ್ ಬಿಡುಗಡೆ ಮಾಡಿದೆ. ಬಿಎಸ್ಎನ್ಎಲ್ 151 ರೂಪಾಯಿ ಯೋಜನೆ ಬಿಡುಗಡೆ ಮಾಡಿದೆ. ಜಿಯೋ ಕೂಡ 247 ರೂಪಾಯಿ ಪ್ಲಾನ್ ಬಿಡುಗಡೆ ಮಾಡಿದೆ. ಬಿಎಸ್ಎನ್ಎಲ್ ಈ ಪ್ಲಾನ್ ನಲ್ಲಿ ಡೇಟಾ ಬಳಕೆ ಯಾವುದೇ ದಿನದ ಮಿತಿಯಿಲ್ಲ. 28 ದಿನಗಳ ಈ ಪ್ಲಾನ್ ನಲ್ಲಿ ಗ್ರಾಹಕರಿಗೆ 40 ಜಿಬಿ ಡೇಟಾ ಲಭ್ಯವಿದೆ. ಗ್ರಾಹಕರು ಈ ಡೇಟಾವನ್ನು ಯಾವಾಗ ಬೇಕಾದ್ರೂ ಬಳಸಬಹುದು.
ಈ ಪ್ಲಾನ್ ನಲ್ಲಿ Zing ಚಂದಾದಾರಿಕೆಯನ್ನು ಉಚಿತವಾಗಿ ಪಡೆಯಬಹುದಾಗಿದೆ. ಆದ್ರೆ ಕರೆ ಹಾಗೂ ಎಸ್ಎಂಎಸ್ ನ ಯಾವುದೇ ಸೌಲಭ್ಯವಿಲ್ಲ. ರಿಲಾಯನ್ಸ್ ಜಿಯೋದ 247 ರೂಪಾಯಿ ಪ್ಲಾನ್ 30 ದಿನಗಳ ಸಿಂಧುತ್ವದೊಂದಿಗೆ ಬರುತ್ತದೆ. 25 ಜಿಬಿ ಡೇಟಾ ಲಭ್ಯವಿದೆ. ಎಲ್ಲ ನೆಟ್ವರ್ಕ್ ಗೆ ಅನಿಯಮಿತ ಕರೆ ಹಾಗೂ ಪ್ರತಿ ದಿನ 100 ಎಸ್ಎಂಎಸ್ ಲಭ್ಯವಿದೆ.