ಬಿಎಸ್ಎನ್ಎಲ್ ತನ್ನ 499 ರೂಪಾಯಿ ಹಾಗೂ 198 ರೂಪಾಯಿ ಯೋಜನೆಯಲ್ಲಿ ಬದಲಾವಣೆ ಮಾಡಿದೆ. ಕಂಪನಿ 499 ರೂಪಾಯಿ ಪ್ಲಾನ್ ನಲ್ಲಿ ಇನ್ಮುಂದೆ ಹೆಚ್ಚಿನ ಡೇಟಾ ನೀಡಲಿದೆ.
ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ಎರಡು ಪ್ರಿಪೇಯ್ಡ್ ಯೋಜನೆಗಳನ್ನು ಪರಿಷ್ಕರಿಸಿದೆ. ಕಂಪನಿಯು ತನ್ನ 499 ಮತ್ತು 198 ರೂಪಾಯಿ ಯೋಜನೆಗಳಲ್ಲಿ ಬದಲಾವಣೆಗಳನ್ನು ಮಾಡಿದೆ. ಬಿಎಸ್ಎನ್ಎಲ್ನ 499 ರೂಪಾಯಿ ಯೋಜನೆಯಲ್ಲಿ ಈಗ ಮೊದಲಿಗಿಂತ ಹೆಚ್ಚಿನ ಡೇಟಾ ಸಿಗಲಿದೆ.
ಬಿಎಸ್ಎನ್ಎಲ್ ಕಂಪನಿಯ 198 ರೂಪಾಯಿ ಯೋಜನೆಯ ಲಾಭವನ್ನು ಕಡಿಮೆ ಮಾಡಿದೆ. ಬಿಎಸ್ಎನ್ಎಲ್ 499 ರೂಪಾಯಿ ಯೋಜನೆಯನ್ನು ನವೀಕರಿಸಿದ್ದು, ಪ್ರತಿ ದಿನ 2 ಜಿಬಿ ಡೇಟಾ ಸಿಗಲಿದೆ. ಈ ಹಿಂದೆ ಕೇವಲ 1 ಜಿಬಿ ಡೇಟಾ ಮಾತ್ರ ಸಿಗ್ತಿತ್ತು. ಅಲ್ಲದೆ ಈ ಯೋಜನೆಯಲ್ಲಿ ಗ್ರಾಹಕರು 84 ದಿನಗಳ ಮಾನ್ಯತೆಯ ಬದಲು 90 ದಿನಗಳ ಮಾನ್ಯತೆಯನ್ನು ಪಡೆಯಲಿದ್ದಾರೆ.
ಬಿಎಸ್ಎನ್ಎಲ್ನ 198 ರೂಪಾಯಿ ಯೋಜನೆಯಲ್ಲಿ ಗ್ರಾಹಕರಿಗೆ ಮೊದಲಿಗಿಂತ ಕಡಿಮೆ ಪ್ರಯೋಜನ ಸಿಗಲಿದೆ. ಈ ಯೋಜನೆಯಲ್ಲಿ ಗ್ರಾಹಕರಿಗೆ ಈ ಮೊದಲು ಪ್ರತಿದಿನ 2 ಜಿಬಿ ಡೇಟಾವನ್ನು ನೀಡಲಾಗುತ್ತಿತ್ತು. ಇದಕ್ಕಾಗಿ 54 ದಿನಗಳ ಮಾನ್ಯತೆ ಸಿಗ್ತಿತ್ತು. ಈಗ ಕಂಪನಿ ಸಿಂಧುತ್ವವನ್ನು ಕೇವಲ 50 ದಿನಗಳಿಗೆ ಇಳಿಸಿದೆ.