ಜನಪ್ರಿಯ ಮೊಬೈಲ್ ನೆಟ್ವರ್ಕ್‌ಗಳು ದಿನೇ ದಿನೇ ದುಬಾರಿಯಾಗ್ತಿವೆ. ಜಿಯೋ, ಏರ್‌ಟೆಲ್ ಮತ್ತು ವಿಐ ಇತ್ತೀಚೆಗಷ್ಟೆ ಪ್ಲಾನ್‌ಗಳ ದರವನ್ನು ಹೆಚ್ಚಿಸಿವೆ. ಇದ್ರಿಂದ ಅಸಮಾಧಾನಗೊಂಡಿರೋ ಗ್ರಾಹಕರು ಮೊಬೈಲ್ ನಂಬರ್ ಅನ್ನು ಬೇರೆ ನೆಟ್ವರ್ಕ್‌ಗೆ ಪೋರ್ಟ್ ಮಾಡಲು ಮುಂದಾಗ್ತಿದ್ದಾರೆ.
ಈ ಕಂಪನಿಗಳಿಗೆ ಹೋಲಿಸಿದ್ರೆ BSNL ಮಾತ್ರ ತನ್ನ ಯೋಜನೆಗಳಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. BSNLನ ಬೆಸ್ಟ್ ಪ್ಲಾನ್ ಒಂದು ಈಗ ಎಲ್ಲರ ಗಮನ ಸೆಳೆಯುತ್ತಿದೆ. ವಿಶೇಷ ಅಂದ್ರೆ ಇದರಲ್ಲಿ ನಿಮಗೆ 395 ದಿನಗಳ ವ್ಯಾಲಿಡಿಟಿ ದೊರೆಯುತ್ತದೆ.
797 ರೂಪಾಯಿಯ ಈ ಪ್ಲಾನ್ ರಿಚಾರ್ಜ್ ಮಾಡಿಕೊಂಡ್ರೆ 395 ದಿನಗಳ ವ್ಯಾಲಿಡಿಟಿ ಸಿಗುತ್ತದೆ. ಲಾಂಚ್ ಆಫರ್ ಆಗಿ ಹೆಚ್ಚುವರಿ 30 ದಿನಗಳ ಮಾನ್ಯತೆ ಕೊಡ್ತಿದೆ ಬಿಎಸ್‌ಎನ್‌ಎಲ್. ಬಳಕೆದಾರರು ಜೂನ್ 12ರೊಳಗೆ ರಿಚಾರ್ಜ್ ಮಾಡಿದ್ರೆ ಮಾತ್ರ ಹೆಚ್ಚುವರಿ ವ್ಯಾಲಿಡಿಟಿ ಸಿಗುತ್ತದೆ. ರಿಚಾರ್ಜ್ ಮಾಡಿ 60 ದಿನಗಳವರೆಗೆ ಗ್ರಾಹಕರು ಕರೆ, ಎಸ್‌ಎಂಎಸ್ ಸೇರಿದಂತೆ ಎಲ್ಲಾ ಪ್ರಯೋಜನಗಳನ್ನು ಪಡೆಯಬಹುದು.
ನಂತರ ಕರೆ ಮಾಡಲು ಅಥವಾ ಇಂಟರ್ನೆಟ್‌ಗಾಗಿ ಬೇರೆ ಪ್ಲಾನ್ ರೀಚಾರ್ಜ್ ಮಾಡಿಕೊಳ್ಳಬೇಕಾಗುತ್ತದೆ. ಈ ಪ್ಲಾನ್‌ನಲ್ಲಿ ಮೊದಲ 60 ದಿನಗಳವರೆಗೆ ಪ್ರತಿದಿನ 2GB ಡೇಟಾ, ಅನಿಯಮಿತ ಕರೆ ಮತ್ತು ದಿನಕ್ಕೆ 100 SMS ಸೌಲಭ್ಯವಿದೆ. 60ನೇ ದಿನದ ನಂತರ ಡೇಟಾ ಸ್ಪೀಡ್ 80 Kbpsಗೆ ಕಡಿಮೆಯಾಗುತ್ತದೆ.
Vodafone Ideaದಲ್ಲಿ 395 ದಿನಗಳ ವ್ಯಾಲಿಡಿಟಿ ಬೇಕಂದ್ರೆ 1799 ರೂಪಾಯಿ ಪ್ಲಾನ್ ರೀಚಾರ್ಜ್ ಮಾಡಬೇಕು. ಅನಿಯಮಿತ ಕರೆ, 24GB ಡೇಟಾ ಮತ್ತು 3600SMS ಸಿಗುತ್ತದೆ. ಏರ್‌ಟೆಲ್ ಗ್ರಾಹಕರಿಗೂ ಸೇಮ್ ಪ್ಲಾನ್ ಲಭ್ಯವಿದೆ. ಜಿಯೋ ಮಾತ್ರ 2545 ರೂಪಾಯಿ ಪ್ಲಾನ್ ಹೊಂದಿದ್ದು, ಇದರಲ್ಲಿ ಪ್ರತಿದಿನ 1.5GB ಡೇಟಾ, ಅನಿಯಮಿತ ಕರೆ ಮತ್ತು ದಿನಕ್ಕೆ 100 SMS 365 ದಿನಗಳವರೆಗೆ ಲಭ್ಯವಿದೆ.