ದೂರಸಂಪರ್ಕ ಅಥವಾ ಬಿಎಸ್ಎನ್ಎಲ್ ನಿಂದ ನಿವೃತ್ತರಾದವರಿಗೆ ಪೆನ್ಷನ್ ಅದಾಲತ್ ಕುರಿತು ಮಹತ್ವದ ಮಾಹಿತಿಯೊಂದು ಇಲ್ಲಿದ್ದು, ಮೇ 17ರಂದು ಪೆನ್ಷನ್ ಅದಾಲತ್ ನಡೆಸಲು ಉದ್ದೇಶಿಸಲಾಗಿದೆ.
ಕರ್ನಾಟಕ ವೃತ್ತದಲ್ಲಿ ದೂರ ಸಂಪರ್ಕ ಅಥವಾ ಬಿಎಸ್ಎನ್ಎಲ್ ನಿಂದ ನಿವೃತ್ತರಾದವರು, ಕುಟುಂಬ ಪಿಂಚಣಿದಾರರು ತಮ್ಮ ಅಹವಾಲುಗಳನ್ನು ಪಿ.ಪಿಓ., ಸಂಖ್ಯೆಯನ್ನು ನಮೂದಿಸಿ ಅಂಚೆ ಅಥವಾ ಇ-ಮೇಲ್ (jtcca2:kar-dot@gov.in) ಮೂಲಕ ಮೇ 4ರ ಒಳಗೆ ಕಳುಹಿಸಬಹುದಾಗಿದೆ.
ಕಾನೂನು ಅಥವಾ ಉತ್ತರಾಧಿಕಾರಿ ಸಂಬಂಧಿತ ಅಥವಾ ನೀತಿ / ನಿಯಮಾವಳಿ ಸಂಬಂಧಿತ ವಿಷಯಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಲಾಗಿದ್ದು, ಅದಾಲತ್ ನಡೆಯುವ ಸ್ಥಳ ಹಾಗೂ ಸಮಯವನ್ನು ಅರ್ಜಿದಾರರಿಗೆ ನೇರವಾಗಿ ತಿಳಿಸಲಾಗುತ್ತದೆ.