ಬಿಎಸ್ಎಫ್ ನಲ್ಲಿ ಕೆಲಸ ಮಾಡಲು ಬಯಸುವವರಿಗೆ ಮಹತ್ವದ ಸುದ್ದಿಯಿದೆ. ಬಾರ್ಡರ್ ಸೆಕ್ಯುರಿಟಿ ಫೋರ್ಸ್‌ನಲ್ಲಿ 72 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು BSF ಗ್ರೂಪ್ C ನೇಮಕಾತಿ 2021 ಗಾಗಿ ಅಧಿಕೃತ ವೆಬ್‌ಸೈಟ್ rectt.bsf.gov.in ನಲ್ಲಿ ಅರ್ಜಿ ಸಲ್ಲಿಸಬೇಕು.
ಈ ಹುದ್ದೆಗೆ ಅರ್ಜಿ ಸಲ್ಲಿಸಲು ಡಿಸೆಂಬರ್ 29 ಕೊನೆ ದಿನವಾಗಿದೆ. ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ಹುದ್ದೆಗಳ ನೇಮಕಾತಿಗೆ ನವೆಂಬರ್ 15 ರಿಂದ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದೆ.
ಗಡಿ ಭದ್ರತಾ ಪಡೆಗೆ 2 ಕಾನ್ಸ್ ಟೇಬಲ್ (ಒಳಚರಂಡಿ), 24 ಕಾನ್ಸ್ ಟೇಬಲ್ (ಜನರೇಟರ್ ಆಪರೇಟರ್), 28 ಕಾನ್ಸ್ ಟೇಬಲ್ (ಜನರೇಟರ್ ಮೆಕ್ಯಾನಿಕ್), 11 ಕಾನ್ಸ್ ಟೇಬಲ್ (ಲೈನ್‌ಮ್ಯಾನ್) 6 ಹೆಡ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಬಾರ್ಡರ್ ಸೆಕ್ಯುರಿಟಿ ಫೋರ್ಸ್‌ನಲ್ಲಿ ಕಾನ್ಸ್ ಟೇಬಲ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 21700 ರೂಪಾಯಿಯಿಂದ 69100 ರೂಪಾಯಿವರೆಗೆ ವೇತನ ಸಿಗಲಿದೆ. ಬೇರೆ ಬೇರೆ ಹುದ್ದೆಗೆ ಬೇರೆ ಬೇರೆ ವೇತನವಿದೆ. ಎಎಸ್‌ಐ ಹುದ್ದೆಗೆ 29200 ರಿಂದ 92300 ರೂಪಾಯಿ ಮತ್ತು ಹೆಡ್ ಕಾನ್ಸ್ ಟೇಬಲ್ ಹುದ್ದೆಗೆ 25500 ರೂಪಾಯಿಯಿಂದ 81100 ರೂಪಾಯಿ ವೇತನ ಸಿಗಲಿದೆ.
ಅಭ್ಯರ್ಥಿಯ ಕನಿಷ್ಠ ವಯಸ್ಸು 18 ವರ್ಷವಾಗಿರಬೇಕು. ಗರಿಷ್ಠ ವಯಸ್ಸು 25 ವರ್ಷ. ಸರ್ಕಾರದ ನಿಯಮಗಳ ಪ್ರಕಾರ, ಎಸ್ಸಿ/ಎಸ್ಟಿ ವರ್ಗದ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಒಬಿಸಿ ವರ್ಗದ ಅಭ್ಯರ್ಥಿಗಳಿಗೆ 3 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ. ಅರ್ಜಿ ಜೊತೆ ಅಭ್ಯರ್ಥಿಗಳು 100 ರೂಪಾಯಿ ಅರ್ಜಿ ಶುಲ್ಕವನ್ನೂ ಪಾವತಿಸಬೇಕಾಗುತ್ತದೆ.
ಲಿಖಿತ ಪರೀಕ್ಷೆ, ದಾಖಲಾತಿ, ದೈಹಿಕ ಪರೀಕ್ಷೆ, ವೈದ್ಯಕೀಯ ಪರೀಕ್ಷೆಯ ಆಧಾರದ ಮೇಲೆ ಈ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.