alex Certify ಉದ್ಯೋಗಾಕಾಂಕ್ಷಿಗಳಿಗೆ ಗುಡ್​ ನ್ಯೂಸ್​: 10 – 12 ನೇ ತರಗತಿ ಪಾಸಾದವರಿಗೆ ಇಲ್ಲಿದೆ ಉದ್ಯೋಗಾವಕಾಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗಾಕಾಂಕ್ಷಿಗಳಿಗೆ ಗುಡ್​ ನ್ಯೂಸ್​: 10 – 12 ನೇ ತರಗತಿ ಪಾಸಾದವರಿಗೆ ಇಲ್ಲಿದೆ ಉದ್ಯೋಗಾವಕಾಶ

ಭಾರತೀಯ ಗಡಿ ಭದ್ರತಾ ಪಡೆ ಎಎಸ್​ಐ, ಕಾನ್ಸ್​ಟೇಬಲ್​ ಸೇರಿದಂತೆ 220ಕ್ಕೂ ಅಧಿಕ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಬಿಎಸ್​ಎಫ್​ ಅಧಿಕೃತ ವೆಬ್​ಸೈಟ್​ನಲ್ಲಿ ಹುದ್ದೆಗಾಗಿ ಅರ್ಜಿ ಸಲ್ಲಿಕೆ ಮಾಡಬಹುದಾಗಿದೆ.

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಮಾಡಲು ಜುಲೈ 26 ಕೊನೆಯ ದಿನಾಂಕವಾಗಿದೆ. ಒಟ್ಟು 220 ಹುದ್ದೆಗಳಿಗೆ ಬಿಎಸ್​ಎಫ್​ ಅರ್ಜಿ ಆಹ್ವಾನಿಸಿದ್ದು ಈ ಕುರಿತ ವಿವರ ಇಲ್ಲಿದೆ ನೋಡಿ :

ಸ್ಟಾಫ್​ ನರ್ಸ್ – 37 ಹುದ್ದೆಗಳು

ಎಎಸ್​ಐ ಆಪರೇಷನ್​ ಥಿಯೇಟರ್​ ಟೆಕ್ನಿಷಿಯನ್​ – 1 ಹುದ್ದೆ

ಎಎಸ್​ಐ ಲ್ಯಾಬೋರೇಟರಿ ಟೆಕ್ನಿಷಿಯನ್​ – 28 ಹುದ್ದೆಗಳು

ಸಿ ದರ್ಜೆ ಹುದ್ದೆಗಳು – 28 ಹುದ್ದೆ

ಹೆಚ್​ಸಿ ಗ್ರೂಪ್​ – 20 ಹುದ್ದೆಗಳು

ಕಾನ್​ಸ್ಟೇಬಲ್​ – 15 ಹುದ್ದೆಗಳು

ವಯೋಮಿತಿ :

ಸ್ಟಾಫ್​ ನರ್ಸ್ – 21 – 30 ವರ್ಷ

ಎಎಸ್​ಐ ಆಪರೇಷನ್​ ಥಿಯೇಟರ್​ ಟೆಕ್ನಿಷಿಯನ್​ – 20 – 25 ವರ್ಷ

ಎಎಸ್​ಐ ಲ್ಯಾಬೋರೇಟರಿ ಟೆಕ್ನಿಷಿಯನ್​ – 18 – 25 ವರ್ಷ

ಗ್ರೂಪ್​ ಸಿ ಹುದ್ದೆ – 18-23 ವರ್ಷ

ಹೆಚ್​ಸಿ – 18 -25 ವರ್ಷ

ಕಾನ್​​ಸ್ಟೇಬಲ್ : 18-25 ವರ್ಷ

ವೇತನ ಶ್ರೇಣಿ :
ಸ್ಟಾಫ್​ ನರ್ಸ್ – 35,400 – . 1,12,400 ರೂಪಾಯಿ

ಎಎಸ್​ಐ ಆಪರೇಷನ್​ ಥಿಯೇಟರ್​ ಟೆಕ್ನಿಷಿಯನ್​ – 29,200 – 92,300 ರೂ

ಎಎಸ್​ಐ ಲ್ಯಾಬೋರೇಟರಿ ಟೆಕ್ನಿಷಿಯನ್​ – 29,200 – 92,300 ರೂಪಾಯಿ

ಗ್ರೂಪ್​ ಸಿ ಹುದ್ದೆ – 21,700 – 69,100 ರೂಪಾಯಿ

ಹೆಚ್​ಸಿ – 25,500 – 81,100 ರೂಪಾಯಿ

ಕಾನ್​ಸ್ಟೇಬಲ್​ – 21,700 – 69,100

ವಿದ್ಯಾರ್ಹತೆ :

ಸ್ಟಾಫ್​ ನರ್ಸ್ – ಅಭ್ಯರ್ಥಿಗಳು 10 + 2ಪರೀಕ್ಷೆಯಲ್ಲಿ ಪಾಸಾಗಿರಬೇಕು ಅಥವಾ ಇದಕ್ಕೆ ಜನರಲ್​ ನರ್ಸಿಂಗ್​​ ಪ್ರೋಗ್ರಾಂ ಡಿಪ್ಲೋಮಾ ಕೋರ್ಸ್​ಗಳನ್ನ ಪೂರೈಸಿರಬೇಕು. ಜನರಲ್​ ನರ್ಸ್​ ಹಾಗೂ ಮಿಡ್​ವೈಫ್​​ನಲ್ಲಿ ನೋಂದಣಿ ಮಾಡಿಸಿರಬೇಕು.

ಎಎಸ್​ಐ ಆಪರೇಷನ್​ ಥಿಯೇಟರ್​ ಟೆಕ್ನಿಷಿಯನ್​ – ವಿಜ್ಞಾನ ವಿಭಾಗದಲ್ಲಿ ದ್ವಿತೀಯ ಪಿಯುಸಿ ಉತ್ತೀರ್ಣರಾಗಿರಬೇಕು. ಜೊತೆಯಲ್ಲಿ ಆಪರೇಷನ್​ ಟೆಕ್ನಿಷಿಯನ್​ ಡಿಪ್ಲೋಮಾವನ್ನ ಮಾನ್ಯ ವಿಶ್ವವಿದ್ಯಾಲಯದ ಮೂಲಕ ಪಡೆದಿರಬೇಕು.

ಎಎಸ್​ಐ ಲ್ಯಾಬೋರೇಟರಿ ಟೆಕ್ನಿಷಿಯನ್​ – ವಿಜ್ಞಾನ ವಿಭಾಗದಲ್ಲಿ 12ನೇ ತರಗತಿ ಉತ್ತೀರ್ಣರಾಗಿರಬೇಕು ಹಾಗೂ ಮೆಡಿಕಲ್​ ಲ್ಯಾಬೋರೇಟರಿ ಟೆಕ್ನಾಲಜಿಯಲ್ಲಿ ಡಿಪ್ಲೋಮಾ ಪೂರೈಸಿರಬೇಕು.

ಸಿಟಿ ಗ್ರೂಪ್​ ಸಿ ಹುದ್ದೆ – ಅಭ್ಯರ್ಥಿಗಳು 10ನೇ ತರಗತಿ ಉತ್ತೀರ್ಣರಾಗಿರಬೇಕು. 2 ವರ್ಷಗಳ ವೃತ್ತಿ ಅನುಭವ ಇರಬೇಕು.

ಹೆಚ್​ಸಿ ಗ್ರೂಪ್​ ಸಿ ಹುದ್ದೆ – 12ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ವೆಟನರಿ ಸ್ಟಾಕ್​ ಅಸಿಸ್ಟೆಂಟ್​ ಆಗಿ 1 ವರ್ಷ ಕೋರ್ಸ್ ಪೂರೈಸಿರಬೇಕು ಹಾಗೂ 1 ವರ್ಷ ಸೇವೆ ಸಲ್ಲಿಸಿದ ಅನುಭವ ಇರಬೇಕು.

ಕಾನ್​ಸ್ಟೇಬಲ್​ – 10ನೇ ತರಗತಿ ಉತ್ತೀರ್ಣರಾಗಿರಬೇಕು. 2 ವರ್ಷ ಸರ್ಕಾರಿ ಪಶು ಆಸ್ಪತ್ರೆಯಲ್ಲಿ ಪ್ರಾಣಿಗಳ ನಿರ್ವಹಣೆ ಮಾಡಿದ ಅನುಭವ ಹೊಂದಿರಬೇಕು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...