ರಾಜ್ಯದ ಪ್ರತಿಷ್ಠಿತ ಜವಳಿ ಅಂಗಡಿಯಾದ ದಾವಣಗೆರೆಯ ಬಿ.ಎಸ್. ಚನ್ನಬಸಪ್ಪ ಅಂಡ್ ಸನ್ಸ್ ಶ್ರಾವಣದಲ್ಲಿ ಆಚರಿಸಲಾಗುವ ನಾಗರಪಂಚಮಿ, ವರಮಹಾಲಕ್ಷ್ಮಿ ಮತ್ತು ಗೌರಿ – ಗಣೇಶ ಹಬ್ಬದ ಪ್ರಯುಕ್ತ ರಿಯಾಯಿತಿ ದರದ ಮಾರಾಟಮೇಳ ಶ್ರಾವಣ ಸಂಭ್ರಮವನ್ನು ಆರಂಭಿಸಲಿದೆ.
ಆಗಸ್ಟ್ 6 ರಿಂದ ಶ್ರಾವಣ ಸಂಭ್ರಮ ಮಾರಾಟ ಮೇಳ ಆರಂಭವಾಗುತ್ತಿದ್ದು, ಹೊಚ್ಚ ಹೊಸ ಡಿಸೈನ್ ಉತ್ಪನ್ನಗಳಿಗೆ ಹೆಚ್ಚುವರಿಯಾಗಿ ಶೇಕಡಾ 10 ರಷ್ಟು ರಿಯಾಯಿತಿ ನೀಡುವ ಮೂಲಕ ‘ಡಬಲ್ ಡಿಸ್ಕೌಂಟ್’ ಸೌಲಭ್ಯ ನೀಡಲಾಗುತ್ತದೆ.
ಬಿಎಸ್ ಚನ್ನಬಸಪ್ಪ ಅಂಡ್ ಸನ್ಸ್ (ಬಿ ಎಸ್ ಸಿ) ನಲ್ಲಿ ಸಾಮಾನ್ಯವಾಗಿ ವರ್ಷವಿಡಿ ಶೇಕಡಾ 10ರ ರಿಯಾಯಿತಿ ಸೌಲಭ್ಯ ನೀಡಲಾಗುತ್ತಿದ್ದು, ಇದೀಗ ಹೆಚ್ಚುವರಿ ಶೇಕಡ 10 ರಿಯಾಯಿತಿಯೊಂದಿಗೆ ಒಟ್ಟು ಶೇ.20 ರಿಯಾಯಿತಿ ಲಭ್ಯವಾಗಲಿದೆ. ಸೀರೆ ಸೇರಿದಂತೆ ಎಲ್ಲ ಮಾದರಿಯ ಬಟ್ಟೆಗಳಿಗೆ ಇದು ಅನ್ವಯವಾಗಲಿದ್ದು, ಆಗಸ್ಟ್ 31ರವರೆಗೆ ಈ ರಿಯಾಯಿತಿ ಮೇಳ ನಡೆಯಲಿದೆ.