ಬೆಂಗಳೂರು: 2021-22ನೇ ಸಾಲಿನ ಪದವಿ ಹಂತದ ಶೈಕ್ಷಣಿಕ ವರ್ಷದ ಆರಂಭಕ್ಕೆ ಸಿದ್ಧತೆ ನಡೆದಿದ್ದು, ಅಕ್ಟೋಬರ್ ಮೊದಲ ವಾರದಿಂದಲೇ ದಾಖಲಾತಿ ಆರಂಭಿಸುವಂತೆ ಕುಲಪತಿಗಳಿಗೆ ಉನ್ನತ ಶಿಕ್ಷಣ ಸಚಿವ, ಡಿಸಿಎಂ ಅಶ್ವತ್ಥನಾರಾಯಣ ಸೂಚನೆ ನೀಡಿದ್ದಾರೆ.
ಕೋವಿಡ್ ಕಾರಣಕ್ಕೆ ಈ ವರ್ಷ ಪಿಯುಸಿಯ ಎಲ್ಲಾ ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಹೀಗಾಗಿ ವಿವಿಧ ಕೋರ್ಸ್ ಗಳಿಗೆ ಬೇಡಿಕೆ ಬರುತ್ತಿದ್ದು, ವಿಶ್ವವಿದ್ಯಾಲಯಗಳಿಗೆ ಇದೊಂದು ಸುವರ್ಣಾವಕಾಶ ಎಂದರು.
ಈ ಬಾರಿ ಬಿ ಎಸ್ ಇ ಕೋರ್ಸ್ ಗೆ ಸಿಇಟಿ ಅಂಕ ಪರಿಗಣನೆ ಇಲ್ಲ. ಅಕ್ಟೋಬರ್ ನಿಂದ ಪದವಿ ತರಗತಿಗಳನ್ನು ಆರಂಭಿಸಲು ಸಿದ್ಧತೆ ಮಾಡಿಕೊಳ್ಳಿ. ಪದವಿ ವ್ಯಾಸಂಗದ ಬಗ್ಗೆ ಆಸಕ್ತಿಯಿರುವ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಿ. ಜಾಗತಿಕ ಮಟ್ಟದಲ್ಲಿ ಪೈಪೋಟಿ ನಡೆಸಬೆಕೆಂದರೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ, ಕಲಿಕೆ ಅಗತ್ಯ. ವಿದ್ಯಾರ್ಥಿಗಳು ತಂತ್ರಜ್ಞಾನ ಬಳಸ್ಕೊಂಡು ವಿದ್ಯಾಭ್ಯಾಸಗಳನ್ನು ನಡೆಸಲು ಟ್ಯಾಬ್ ನೀಡಲಾಗುತ್ತಿದ್ದು, ಸ್ಮಾರ್ಟ್ ಕ್ಲಾಸ್ ಗಳು ಆರಂಭವಾಗುತ್ತಿವೆ ಎಂದು ಹೇಳಿದರು.