ಬ್ರಿಟಿಷ್ ಮೋಟಾರ್ ಸೈಕಲ್ ಉತ್ಪಾದಕ ಬಿಎಸ್‌ಎ ಮೋಟಾರ್ ಸೈಕಲ್ಸ್ ದಶಕಗಳ ಬಳಿಕ ಮರುಜೀವ ಪಡೆದುಕೊಂಡಿದ್ದು, ಬ್ರಿಟನ್‌ನ ಬರ್ಮಿಂಗ್‌ಹ್ಯಾಂನಲ್ಲಿ ಆಯೋಜಿಸಿದ್ದ ವಿಶೇಷ ಸಮಾರಂಭವೊಂದರಲ್ಲಿ ರೀಲಾಂಚ್ ಆಗಿದೆ.
ಮಹಿಂದ್ರಾ ಸಮೂಹದ ಕ್ಲಾಸಿಕ್ ಲೆಜೆಂಡ್ಸ್ ಈ ಕ್ಲಾಸಿಕ್ ಬ್ರಾಂಡ್‌ಗೆ ’ಬಿಎಸ್‌ಎ’ ಹೆಸರಿನಲ್ಲೇ ಮರುಜೀವ ಕೊಟ್ಟಿದೆ. 1938 ಹಾಗೂ 1963ರ ನಡುವೆ ಮಾರಾಟವಾಗುತ್ತಿದ್ದ ಬಿಎಸ್‌ಎ ಗೋಲ್ಡ್‌ಸ್ಟಾರ್ ಬೈಕ್ ಅನ್ನು 350ಸಿಸಿ ಹಾಗೂ 500 ಸಿಸಿ ಗಳ ಅವತರಣಿಕೆಯಲ್ಲಿ ಹೊರತರಲಾಗುತ್ತಿದೆ. ಈ ಬೈಕ್ ಗಳನ್ನು ಸಮಾರಂಭದ ವೇಳೆ ಪ್ರದರ್ಶಿಸಲಾಗಿದೆ.
2022ರ ಬಿಎಸ್‌ಎ ಗೋಲ್ಡ್ ಸ್ಟಾಟರ್ ತನ್ನ ಕ್ಲಾಸಿಕ್ ಶೈಲಿಯನ್ನು ಹಾಗೇ ಉಳಿಸಿಕೊಂಡಿದ್ದು, ಶಕ್ತಿಯನ್ನು ಮಾತ್ರ 650 ಸಿಸಿಯ ಸಿಂಗಲ್ ಸಿಲಿಂಡರ್ ಎಇಓಎಚ್‌ಸಿ ಇಂಜಿನ್‌ನಿಂದ ಪಡೆಯುತ್ತಿದೆ.
ಡಿಸೆಂಬರ್ 4, 2021ರಲ್ಲಿ ಸಾರ್ವಜನಿಕವಾಗಿ ಪಾದಾರ್ಪಣೆ ಮಾಡಲಿರುವ ಬಿಎಸ್‌ಎ ಗೋಲ್ಡ್ ಸ್ಟಾರ್ ಕುರಿತು ಹೆಚ್ಚಿನ ಮಾಹಿತಿಯನ್ನು ಇನ್ನೇನು ಬಿಡುಗಡೆ ಮಾಡಲಾಗುವುದು.
ಬ್ರಿಟನ್‌ನಲ್ಲಿ ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾದ ಬಿಎಸ್‌ಎಯ ಹೊಸ ಮೋಟಾರ್ ಸೈಕಲ್ ಅನ್ನು, ಬರ್ಮಿಂಗ್‌ಹ್ಯಾಂನಲ್ಲೇ ಉತ್ಪಾದಿಸಲಾಗುತ್ತಿದೆ. ಬಿಎಸ್‌ಎಯ ವಿಸ್ತೃತ ರೂಪ ’ಬರ್ಮಿಂಗ್‌ಹ್ಯಾಂ ಸ್ಮಾಲ್ ಆರ್ಮ್ಸ್’.
ಮಾಲಿನ್ಯಕಾರಕಗಳನ್ನು ಸೂಸದೇ ಇರುವ ಮೋಟಾರ್ ಸೈಕಲ್‌ಗಳ ಅಭಿವೃದ್ಧಿಗಾಗಿ ಬ್ರಿಟನ್ ಸರ್ಕಾರವು 4.6 ದಶಲಕ್ಷ ಪೌಂಡ್‌ಗಳ ನೆರವಿನ ಧನವನ್ನು ಕ್ಲಾಸಿಕ್ ಲೆಜೆಂಡ್ಸ್‌ಗೆ ನೀಡಿದೆ.